ಕ್ರೈಂ

ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನ ಸಮೀಪ ಅಕ್ರಮ ಹಂದಿ ಫಾರ್ಮ್: ಊರಿಡೀ ದುರ್ನಾತ..!

996

ಸುಳ್ಯ : ದ.ಕ ಜಿಲ್ಲೆಯ ಪುರಾತನ ದೇವಸ್ಥಾನಗಳಲ್ಲಿ ತೋಡಿಕಾನ  ಶ್ರೀ ಮಲ್ಲಿಕಾರ್ಜುನ ದೇವಸ್ಥಾನವೂ ಒಂದಾಗಿದೆ. ಇದರ ಪಾವಿತ್ರ್ಯಕ್ಕೆ ದಕ್ಕೆಯಾಗುತ್ತಿದೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ. ಸ್ಥಳೀಯ ವ್ಯಕ್ತಿಯೊಬ್ಬರು ದೇವಸ್ಥಾನದ ಸಮೀಪ ಹಂದಿ ಫಾರ್ಮ್ ತೆರೆದಿರುವುದೇ ಎಲ್ಲ ವಿವಾದಗಳಿಗೆ ಕಾರಣವಾಗಿದ್ದು ಕೂಡಲೇ ಈ ಹಂದಿ ಫಾರ್ಮ್ ಅನ್ನು ಮುಚ್ಚಿಸಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಏನಿದು ವಿವಾದ?

ಅರಂತೋಡು ಗ್ರಾಮದ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಹೊಸತೋಟ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ  ಸ್ಥಳೀಯ ವ್ಯಕ್ತಿ  ಹಂದಿ ಫಾರ್ಮ್ ಪ್ರಾರಂಭ ಮಾಡಿದ್ದರು. ಫಾರ್ಮ್ ಆರಂಭಕ್ಕೂ ಮುಂಚೆಯೇ ಸ್ಥಳೀಯರು ಅಕ್ಷೇಪಣೆ ಸಲ್ಲಿಸಿದ್ದಾರೆ.  ಪಂಚಾಯತ್ , ಕಂದಾಯ ಇಲಾಖೆ,  ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೂ ತಂದು ಮನವಿ ನೀಡಿದ್ದರು. ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಅಕ್ರಮವಾಗಿ ನಡೆಸುತ್ತಿರುವ ವ್ಯಕ್ತಿಯ ಪರವಾಗಿ ಗ್ರಾಮ ಪಂಚಾಯತ್ ಆಡಳಿತ ದ ಸಹಕಾರವಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಹೊಸತೋಟ ನಿವಾಸಿ ಜಗದೀಶ್ ಕಳೆದ ಎರಡೂ ತಿಂಗಳ ಹಿಂದೆ ಹಂದಿ ಫಾರ್ಮ್  ಪ್ರಾರಂಭಿಸಿದ್ದು, ಇಲ್ಲಿ 150 ಕ್ಕೂ  ಹೆಚ್ಚು ಹಂದಿಗಳನ್ನು ಸಾಕುತ್ತಿದ್ದಾರೆ.  ಹಂದಿಗಳಿಗೆ ತಿನ್ನಲು ಕೊಳೆತ ವಸ್ತುಗಳನ್ನು ಅಲ್ಲಿಯೇ ಶೇಖರಣೆ ಮಾಡಲಾಗುತ್ತದೆ. ಇದರ ವಾಸನೆ ಜೊತೆ ಹಂದಿಗಳಿರುವ ಗೂಡನ್ನು  ತೊಳೆಯುವ ನೀರಿನ ದುರ್ನಾತ ಇಡಿ ಪರಿಸರದಲ್ಲಿ ಹರುಡುತ್ತಿದೆ, ಇದರಿಂದ ಪಕ್ಕದಲ್ಲಿರುವ ಮನೆಗಳಲ್ಲಿ ಕುಳಿತುಕೊಳ್ಳದಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ . ಫಾರ್ಮ್ ನ  ಕೊಳಚೆ ನೀರನ್ನು ಪೈಪ್ ಮೂಲಕ ಮಲ್ಲಿಕಾರ್ಜುನ ಸ್ವಾಮಿಯ ದರ್ಪಣ ತೀರ್ಥದ ಹಳ್ಳಕ್ಕೆ ಬಿಡಲಾಗುತ್ತಿದೆ, ಇದರಿಂದಾಗಿ ಹಳ್ಳದ ನೀರು ಮಾಲಿನ್ಯವಾಗುತ್ತಿದೆ. ಈ ಪಾರ್ಮ್ ನ ಪಕ್ಕದಲ್ಲಿಯೇ  ರಕ್ತೇಶ್ವರಿ ದೇವಿ ಮತ್ತು ನಾಗದೇವರ ಗುಡಿಗಳಿವೆ  ಹಂದಿ ಫಾರ್ಮ್ ನಿಂದಾಗಿ ಗುಡಿಗಳು ಅಪವಿತ್ರವಾಗುತ್ತಿದೆ , ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ, ದೇವಸ್ಥಾನದ ವತಿಯಿಂದಲೂ ಅಕ್ಷೇಪ ಸಲ್ಲಿಸಿದ್ದರು ಯಾವುದೇ ಪ್ರಯೋಜನ ವಾಗಿಲ್ಲ.

See also  ರಾಕೇಶ್‌ ಸಿದ್ದರಾಮಯ್ಯ ಸಾವಿನ ರಹಸ್ಯವೂ ಬಯಲಾಗಲಿದೆ ಎಂದ ಹೆಚ್.ಡಿ.ಕೆ..! ದಾಖಲೆಗಳಿವೆ ಎಂದ ಹೆಚ್.ಡಿ.ಕುಮಾರಸ್ವಾಮಿ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget