ಸುಳ್ಯ

ಮರ್ಕಂಜದಲ್ಲಿ 6 ಪವನ್‌ ಚಿನ್ನ, 62, 000 ರೂ. ನಗದು ದೋಚಿದ ಖತರ್ನಾಕ್ ಕಳ್ಳರು

1.2k

ಮರ್ಕಂಜ: ಒಬ್ಬಂಟಿ ವಾಸಿಸುತ್ತಿದ್ದ ಮನೆಯಿಂದ ಯಾರೂ ಇಲ್ಲದ ಸಮಯದಲ್ಲಿ ಮನೆಯಿಂದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಘಟನೆಯೊಂದು ಮರ್ಕಂಜದ ತೇರ್ಥಮಜಲು ಎಂಬಲ್ಲಿ ನಡೆದಿದೆ. ತೇರ್ಥಮಜಲು ಬಳಿಯ ಸೂಟೆಗದ್ದೆ ದಾಮೋದರ ಪೂಜಾರಿ ಎಂಬವರ ಮನೆಯಿಂದ ತೋಟ ಲೀಸಿಗೆ ತೆಗೆದುಕೊಳ್ಳಲು ತಂದಿರಿಸಿದ್ದ 62,000 ಮತ್ತು ಪತ್ನಿ,ಮಕ್ಕಳ ಒಟ್ಟು 6ಪವನ್ ಚಿನ್ನಾಭರಣ ಕಳವುಗೈಯಲ್ಪಟ್ಟಿದೆ.

ಏನಿದು ಘಟನೆ?

ಮರ್ಕಂಜದಲ್ಲಿ ಬೇಕರಿ ಕೆಲಸ ಮಾಡಿಕೊಂಡಿರುವ ಹಾಸನದ ಮಂಜು ಎಂಬವರು ದಾಮೋದರರನ್ನು ತನ್ನ ಗೆಳೆಯ ಹಾಸನದ ಕುಮಾರ ಎಂಬವರ ಜೊತೆ ಮಾತನಾಡಲು ಇದೆ ಎಂದು ಜು.31ರಂದು ಸಂಜೆ ಸುಬ್ರಹ್ಮಣಕ್ಕೆ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಆದರೆ ಸುಬ್ರಹ್ಮಣ್ಮದಲ್ಲಿ ಇವರಿಬ್ಬರು ಕುಮಾರ ಎಂಬಾತನನ್ನು ಹುಡುಕಿದರು ಸಿಗಲಿಲ್ಲವೆಂದು, ಆತ ಫೋನ್ ರಿಸೀವ್ ಮಾಡದ ಕಾರಣ ಇವರಿಬ್ಬರು ಹಿಂದಿರುಗಿದರು. ಮಾರ್ಗಮಧ್ಯೆ ಕುಮಾರ ಎಂಬಾತ ಮಂಜುವಿಗೆ ಫೋನ್ ಮಾಡಿ ಸುಬ್ರಹ್ಮಣ್ಯಕ್ಕೆ ಬರುವಂತೆ ಹೇಳಿದ. ಅವರಿಬ್ಬರು ವಾಪಾಸ್ ಸುಬ್ರಹ್ಮಣ್ಯಕ್ಕೆ ಬಂದು,ಅಲ್ಲಿ ದಾಮೋದರರನ್ನು ಬಿಟ್ಟು ಕುಮಾರ ಮತ್ತು ಮಂಜು ಮಾತನಾಡಿ,ಸುಬ್ರಹ್ಮಣ್ಯದಿಂದ ದಾಮೋದರ ಮತ್ತು ಮಂಜು ಪುನಹ ಮರ್ಕಂಜದ ಕಡೆಗೆ ಬಂದಿದ್ದಾರೆ. ದಾಮೋದರರನ್ನು ಮಂಜು ತೇರ್ಥಮಜಲಿನಲ್ಲಿ ದಾಮೋದರರ ಮನೆಗೆ ಹೋಗುವಲ್ಲಿ ಇಳಿಸಿಹೋಗಿದ್ದಾನೆ. ದಾಮೋದರರು ತಮ್ಮ ಮನೆಗೆ ನಡೆದುಕೊಂಡು ಹೋಗಿ ಮನೆಯ ಎದುರಿನ ಬಾಗಿಲಿನ ಬೀಗ ತೆಗೆದು ಮಲಗಿದ್ದಾರೆ. ಆಗ ಸುಮಾರು 10.30 ಆಗಿತ್ತು. ದಾಮೋದರರು ಮರುದಿನ ಎದ್ದು ಪದಾರ್ಥ ಮಾಡಲೆಂದು ಅಡುಗೆ ಕೋಣೆಗೆ ಹೋಗುವ ಸಂದರ್ಭ ಮನೆಯೊಳಗೆ ಚೆಲ್ಲಾಡಿರುವುದು ಕಂಡು ಬಂದಿದೆ.ಅಲ್ಲದೆ ಹಣ ಹಾಗೂ ಚಿನ್ನಾಭರಣ ಕಳವುಗೈದಿರುವುದು ಗಮನಕ್ಕೆ ಬಂದಿದೆ .ಬಳಿಕ ಸ್ಥಳೀಯರಿಗೆ ಮಾಹಿತಿ ನೀಡಿದ ದಾಮೋದರರು ಸುಳ್ಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರು ವಿಚಾರಣೆ ನಡೆಸುತ್ತಿದ್ದು ಹಾಸನದ ಕುಮಾರ ಮತ್ತು ಮಂಜುರವರನ್ನು ಪೋಲಿಸ್ ಠಾಣೆಗೆ ಕರೆತಂದು ವಿಚಾರಿಸಿರುವುದಾಗಿಯೂ ತಿಳಿದು ಬಂದಿದೆ.

ದಾಮೋದರ ಪೂಜಾರಿಯವರನ್ನು ಅವರ ಪತ್ನಿ ಮತ್ತು ಮಕ್ಕಳು 6 ವರ್ಷದ ಹಿಂದೆ ಬಿಟ್ಟು ಹೋಗಿದ್ದು, ಮನೆಯಲ್ಲಿ ಇವರು ಒಬ್ಬರೆ ವಾಸಿಸುತ್ತಿದ್ದರು. ಇವರು  ಮದ್ದುಬಿಡುವ, ಅಡಿಕೆ ತೆಗೆಯುವಂತಹ ಕೆಲಸ ಮಾಡುತ್ತಿದ್ದು. ಮಂಜು ಎಂಬವರು ದಾಮೋದರರಿಗೆ ಮದುವೆ ಮಾಡುವ ವಿಚಾರವಾಗಿ ಹಾಸನದ ಕುಮಾರ ಪರಿಚಿತನಾಗಿದ್ದ. ಅಲ್ಲದೆ ಈ ಹಿಂದೆಯು ದಾಮೋದರರ ಮನೆಗೆ ಬಂದು ಹೋಗಿದ್ದ ಇದೀಗ ಅವರೆ ಕಳವುಗೈಯುವ ಉದ್ದೇಶದಿಂದ ದಾಮೋದರರವರನ್ನು ಸುಬ್ರಹ್ಮಣ್ಯಕೆ ಕರೆದುಕೊಂಡು ಹೋಗುವ ಪ್ಲಾನ್ ಮಾಡಿರಬೇಕೆಂದು ದಾಮೋದರರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

See also  ಸುಳ್ಯ:ಕೂಜಿಮಲೆ ರಬ್ಬರ್‌ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡ ಆ ಅಪರಿಚಿತ ಮಹಿಳೆ ಯಾರು?ಮೂರನೇ ಬಾರಿ ನಕ್ಸಲರ ಪ್ರತ್ಯಕ್ಷ?ಮತ್ತೆ ನಕ್ಸಲ್‌ ಸಂಚಾರ?
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget