ಕ್ರೈಂ

ತಲವಾರು ತೋರಿಸಿ ದನ ಕಳವು ಪ್ರಕರಣ: ನಾಲ್ವರು ಆರೋಪಿಗಳು ಅರೆಸ್ಟ್

457
Spread the love

ಮಂಗಳೂರು:   ಇಲ್ಲಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗ್ರಾ ಕೂಳೂರು ಗೋಲ್ಡ್ ಫಿಂಚ್ ಗ್ರೌಂಡ್ ಬಳಿ ತಲವಾರು ತೋರಿಸಿ ದನ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳವು ಮಾಡಲು ಬಳಸಿದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ಜೊತೆಗೆ ಆರೋಪಿಗಳಾದ ಮೊಹಮದ್ ಸಲೀಂ (32), ಮೊಹಮದ್ ತಂಜಿಲ್ ((25) ಮೊಹಮದ್ ಇಕ್ಬಾಲ್ (23) ಹಾಗೂ ಅಫ್ರಿದಿ ಎಂಬವರನ್ನು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಬೆಳಗ್ಗೆ 4.30ಕ್ಕೆ ಉಮೇಶ್ ಮಲರಾಯಸಾನ ಮತ್ತು ಉದಯ ಶೆಟ್ಟಿ ಎಂಬವರ ಮೇಯಲು ಬಿಟ್ಟ 3 ದನಗಳನ್ನು ಮಾರಕಾಸ್ತ್ರ ಝಳಪಿಸಿ ಆರೋಪಿಗಳು ಕದ್ದೊಯ್ದಿದ್ದರು. ಪ್ರಕರಣವನ್ನು ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಸಿಪಿ ಮಹೇಶ್ ಕುಮಾರ್ ರವರ ಸಲಹೆಯಂತೆ ಕಾವೂರು ಠಾಣಾ ಸಿಬ್ಬಂದಿ, ಮೂಡಬಿದ್ರೆ ಠಾಣಾ ಸಿಬ್ಬಂದಿ, ಬಜಪೆ ಠಾಣಾ ಸಿಬ್ಬಂದಿ ಭೇದಿಸಿದ್ದಾರೆ.

See also  ಮಗಳನ್ನು ಸೊಂಟಕ್ಕೆ ಕಟ್ಟಿ ಕೆರೆಗೆ ಹಾರಿದ ತಾಯಿ..! ಐತಿಹಾಸಿಕ ಪ್ರವಾಸಿ ತಾಣದಲ್ಲಿ 5 ವರ್ಷದ ಮಗುವಿನ ದುರಂತ ಅಂತ್ಯಕ್ಕೆ ಕಾರಣವೇನು?
  Ad Widget   Ad Widget   Ad Widget   Ad Widget   Ad Widget   Ad Widget