ಕ್ರೀಡೆ/ಸಿನಿಮಾ

ಪಾಕ್ ವಿರುದ್ಧದ ಸೋಲು ಮರೆತು ನ್ಯೂಜಿಲೆಂಡ್ ಪಂದ್ಯಕ್ಕೆ ಚಿಯರ್ ಮಾಡಿದ ಫ್ಯಾನ್ಸ್ !

521
Spread the love

ಬೆಂಗಳೂರು: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಪಾಕಿಸ್ತಾನ ಎದುರು ಭಾರತ ಮೊದಲ ಸೋಲು ಅನುಭವಿಸಿತ್ತು. ಇದು ಕ್ರಿಕೆಟ್ ಪ್ರಿಯರಿಗೆ ಭಾರಿ ನೋವನ್ನುಂಟು ಮಾಡಿತ್ತು. ಈಗ ಅದರಿಂದ ಚೇತರಿಕೊಂಡಿದ್ದು ಮತ್ತೆ ಘರ್ಜಿಸಿ ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಭಾರತ ತಂಡವನ್ನು ಹುರಿದುಂಬಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣ ‘ಕೂ’ ನಲ್ಲಿ ಈ ಕುರಿತು ಕ್ರಿಕೆಟಿಗರು ಹಾಗು ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆ ಅಭಿಪ್ರಾಯಗಳು ಹೀಗಿವೆ ನೋಡಿ..

‘ಭಾರತ ಮತ್ತಷ್ಟು ಗಟ್ಟಿಯಾಗಿ ಹೊರಮೊಮ್ಮಲಿದೆ’ ಎಂದು ಕ್ರಿಕೆಟಿಗ ವೃದ್ಧಿಮಾನ್ ಸಹಾ ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಮ್ಮೆ ನಿಮ್ಮ ಆರ್ಭಟವನ್ನು ತೋರಿಸಿ ಗಟ್ಟಿಯಾಗಿ #ಮತ್ತೆ ಘರ್ಜಿಸಿ ಆದ್ರೆ ಮೊನ್ನೆಯ ಸಪ್ಪೆಯಾದ ಘರ್ಜನೆ ಮಾತ್ರ ಮಾಡಬ್ಯಾಡ್ರಿ. ಹುಲಿಯ ಬೇಟೆ ತಪ್ಪಿದ ಮಾತ್ರಕ್ಕೆ ಉಪವಾಸ ಇರಲ್ಲ ಮತ್ತೊಂದು ದಿನ ಭರ್ಜರಿ ಬೇಟೆ ಇದ್ದೇ ಇರತ್ತೆ’ ರಾಜನಂದಿನಿ ಎನ್ನುವವರು ಕೂ ಮಾಡಿದ್ದಾರೆ.

ಪಾಕ್ ವಿರುದ್ಧದ ಸೋಲನ್ನ ಮರೆಸುವ ಪ್ರೊಸೆಸ್ ಶುರುವಾಗ್ಲಿ’ ಎಂದು ಸುನೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲುವು ಸಾಧಿಸುತ್ತದೆಯೇ ಎನ್ನುವ ಕ್ರಿಕೆಟ್ ಅಭಿಮಾನಿಯೊಬ್ಬರ ಪ್ರಶ್ನೆಗೆ ಸಾಕಷ್ಟು ಮಂದಿ ಗೆಲುವು ಪಕ್ಕಾ ಎಂದು ಓಟ್ ಮಾಡಿದ್ದಾರೆ.

‘ಭಾರತ ತಂಡದಲ್ಲಿ ಯಾವುದೇ ಸಮಸ್ಯೆಯಿಲ್ಲ ತಂಡ ಸದೃಢವಾಗಿದೆ ಆದರೆ, ಮೊನ್ನೆಯ ಪಂದ್ಯ ಕೆಲವು ಚಿಕ್ಕಪುಟ್ಟ ತಪ್ಪುಗಳಿಂದ ಸೋತಿರಬಹುದು ಆದರೆ, ಪುನಃ ಭಾರತ ತಂಡ ಫೀನಿಕ್ಸ್ ನಂತೆ ಎದ್ದು ಬರಲಿದೆ ಎಂಬ ವಿಸ್ವಾಸವಿದೆ’ ಎಂದು ಕಾರ್ತಿಕ್ ಎನ್ನುವವರು ಕೂ ಮಾಡಿದ್ದಾರೆ.

‘ಮುಂಬರಲಿರುವ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಕ್ರಿಕೆಟ್ ಪ್ರಿಯರ ಹಾರೈಕೆಯೊಂದಿಗೆ! ಭಾರತ ಗೆಲ್ಲುವ ಮೂಲಕ ಪುಟಿದೇಳಲಿದೆ!’ ಎಂದು ನರೇಶ್ ಎನ್ನುವವರು ಹೇಳಿದ್ದಾರೆ.

See also  ಬಹುಭಾಷಾ ನಟಿ ಒವಿಯಾ ಖಾಸಗಿ ವಿಡಿಯೋ ಲೀಕ್..? ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಆಗಿ ಉತ್ತರಿಸಿದ ನಟಿ..!
  Ad Widget   Ad Widget   Ad Widget   Ad Widget   Ad Widget   Ad Widget