ಕರಾವಳಿ

ಸುಣ್ಣಮೂಲೆ: ವಿದ್ಯುತ್ ದುರಂತ, ಗುಡ್ಡಕ್ಕೆ ಬೆಂಕಿ

336
Spread the love

ಸುಣ್ಣಮೂಲೆ: ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಗುಡ್ಡಪ್ರದೇಶಕ್ಕೆ ಬೆಂಕಿ ಹತ್ತಿಕೊಂಡು ಪಕ್ಕದ ರಬ್ಬರ್ ತೋಟಕ್ಕೂ ವ್ಯಾಪಿಸಿದ ಘಟನೆ ಫೆ.25ರಂದು ರಾತ್ರಿ ಸಂಭವಿಸಿದೆ.

ಹಸನ್ ಹಾಗೂ ಇ.ಕೆ. ಹಸೈನಾರ್ ಎಂಬವರ ಜಾಗದಲ್ಲಿ ಅವಘಡ ಸಂಭವಿಸಿದೆ. ಪರಿಣಾಮವಾಗಿ ಹಸನ್ ಅವರ ರಬ್ಬರ್ ತೋಟ ಹಾಗೂ ಹಸೈನಾರ್ ಅವರ ಅಕೇಶಿಯಾ ಪ್ಲಾಂಟೇಷನ್ ನ ಸ್ವಲ್ಪಭಾಗ ಬೆಂಕಿಗೆ ಆಹುತಿಯಾಗಿದೆ. ಸಂಜೆ ವೇಳೆ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಹಸನ್ ,ಶಾಕಿರ್, ಪ್ರಭಾಕರ, ಜುನೈದ್, ರಶೀದ್ ಸೇರಿದಂತೆ ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಿದ್ದರು. ಆದರೆ ರಾತ್ರಿ ವೇಳೆ ಮತ್ತೆ ಬೆಂಕಿ ಹತ್ತಿಕೊಂಡದ್ದರಿಂದ ಸುಳ್ಯ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಅವರು ಬಂದು ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.

See also  ಮಂಗಳೂರಲ್ಲಿ ಭಾರಿ ಮಳೆ,ದ.ಕ ಜಿಲ್ಲೆಯ 5 ತಾಲೂಕುಗಳಿಗೆ ರಜೆ ಘೋಷಣೆ
  Ad Widget   Ad Widget   Ad Widget   Ad Widget   Ad Widget   Ad Widget