Latestಕರಾವಳಿಕ್ರೈಂಪುತ್ತೂರು

ಸುಳ್ಯ : ಮಂಗಳಾ ದೇವಿ ಡ್ರೈವಿಂಗ್ ಸ್ಕೂಲ್ ಮಾಲೀಕ ನದಿಗೆ ಹಾರಿರುವ ಶಂಕೆ..! ನದಿಯ ಸುತ್ತ ಜಮಾಯಿಸಿದ ಜನರು

7k

ನ್ಯೂಸ್ ನಾಟೌಟ್: ಸುಳ್ಯದ ಹಳೆಗೇಟು ಬಳಿ ಇರುವ ಮಂಗಳಾ ಡ್ರೈವಿಂಗ್ ಸ್ಕೂಲ್ ಇದರ ಮಾಲೀಕರಲ್ಲಿ ಒಬ್ಬರಾಗಿರುವ ರಮೇಶ್ ರೈ ಅವರು ಬಂಟ್ವಾಳ ತಾಲೂಕು ಪಾಣೆ ಮಂಗಳೂರು ಬಳಿಯ ಸೇತುವೆಯಿಂದ ಹಾರಿರುವ ಶಂಕೆ ವ್ಯಕ್ತವಾಗಿದೆ.

ಹಳೆಗೇಟು ಪೆಟ್ರೋಲ್ ಮುಂಭಾಗ ಕಳೆದ ನಾಲ್ಕೈದು ವರ್ಷಗಳಿಂದ ಡ್ರೈವಿಂಗ್ ಸ್ಕೂಲ್ ನಡೆಸಿಕೊಂಡು ಬರುತ್ತಿದ್ದಾರೆ. ಸ್ಥಳದಲ್ಲಿ ಚಪ್ಪಲಿ , ಶರ್ಟ್ ,ಮೊಬೈಲ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಊರವರು, ಸಂಬಂಧಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ನೀರಿನಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ರಮೇಶ್ ರೈ ಅವರು ಪುತ್ತೂರು ನಗರ ಸಭಾ ಸದಸ್ಯರಾಗಿದ್ದಾರೆ. ರಮೇಶ್ ರೈ ಅವರು ಇತ್ತೀಚಿಗೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿವೆ. ಸ್ಥಳದಲ್ಲಿ ಸಿಕ್ಕಿದ ಮೊಬೈಲ್ ನಿಂದ ನಂಬರ್ ಪಡೆದು ಪೋನ್ ಮಾಡಿದಾಗ ಇದು ಪುತ್ತೂರು ರಮೇಶ್ ರೈ ಅವರದು ಎಂದು ತಿಳಿದು ಬಂದಿದೆ.

See also  ಅಮ್ಮ, ಅಪ್ರಾಪ್ತ ಮಗಳು ಸ್ನಾನ ಮಾಡುವಾಗ ಮೊಬೈಲ್ ನಲ್ಲಿ ಶೂಟಿಂಗ್ ಮಾಡಿದ ಕಾಮುಕ..!, ರಂಶೀದ್ ಗೆ 15 ವರ್ಷ ಜೈಲು, 15 ಸಾವಿರ ರೂ. ದಂಡ ಜಡಿದ ನ್ಯಾಯಾಲಯ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget