ನ್ಯೂಸ್ ನಾಟೌಟ್: ಸುಳ್ಯ ನಗರದ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಕೆ.ಎಂ. ಮುಸ್ತಫಾ ಅವರನ್ನು ಸಿಎಂ ಸಿದ್ದರಾಮಯ್ಯ ನೇಮಕ ಮಾಡಿದ್ದಾರೆ.
ಸುಳ್ಯಕ್ಕೆ ಇದುವರೆಗೆ ಯೋಜನಾ ಪ್ರಾಧಿಕಾರ ಇರಲಿಲ್ಲ. ಆ ಬಗೆಗಿನ ಕಡತ ಸಿದ್ಧಗೊಳ್ಳುವಂತೆ ಮಾಡಿ ನಿರಂತರ ಅದರ ಫಾಲೋಅಪ್ ಮಾಡಿ ಪ್ರಾಧಿಕಾರ ರಚನೆಯ ಘೋಷಣೆ ಆಗುವಂತೆ ಮಾಡಿದ ಕೆ.ಎಂ.ಮುಸ್ತಫ್ ರವರನ್ನೇ ಸರಕಾರ ಇದೀಗ ಅದರ ಪ್ರಥಮ ಅಧ್ಯಕ್ಷರಾಗಿ ನೇಮಕ ಮಾಡಿದೆ. ಹಿಂದೊಮ್ಮೆ ಸುಳ್ಯ ನಗರ ಪಂಚಾಯತ್ ನಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದಾಗ ಅದರ ಅಧ್ಯಕ್ಷತೆಯ ಅಭ್ಯರ್ಥಿಯಾಗಿ ಕೆ.ಎಂ. ಮುಸ್ತಫರವರನ್ನು ಪಕ್ಷ ಆಯ್ಕೆ ಮಾಡಿತ್ತು. ಆದರೆ ಪಕ್ಷದೊಳಗೆ ಎದ್ದ ಬಂಡಾಯದಿಂದಾಗಿ ಅಧ್ಯಕ್ಷತೆ ಅವರ ಕೈತಪ್ಪಿತ್ತು.
View this post on Instagram
ಈಗ ಸುಳ್ಯ ನಗರದ ಭವಿಷ್ಯ ಬರೆಯಬಹುದಾದ ಸೂಡ ಅಧ್ಯಕ್ಷ ಸ್ಥಾನ ದೊರಕಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಸುಳ್ಯದ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ಎಒಎಲ್ ಇ) ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ಅವರು ತಮ್ಮ ಸಂಸ್ಥೆಗೆ ಬರಮಾಡಿಕೊಂಡು ಸನ್ಮಾನಿಸಿದರು. ಈ ವೇಳೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ. ಲೀಲಾಧರ ಡಿ.ವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೆ.ಎಂ. ಮುಸ್ತಫಾ ಅವರು ನಗರ ಪಂಚಾಯತ್ ಸದಸ್ಯರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಒಂದು ಅವಧಿ, ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಕೆವಿಜಿ ಆಯುರ್ವೇದ ಫಾರ್ಮ ಆಂಡ್ ರಿಸರ್ಚ್ ಸೆಂಟರ್ ನ ಆಡಳಿತಾಧಿಕಾರಿ ಡಾ ಪುರುಷೋತ್ತಮ್ ಕೆ ಜಿ, ಡಾ ಲಕ್ಷ್ಮೀಶ ಕೆ ಎಸ್, ಡಾ ಹರ್ಷವರ್ಧನ್ ಕೆ, ಡಾ. ಕವಿತಾ ಬಿ ಎಂ, ಡಾ ಭಾಗ್ಯೆಶ್, ರಿಯಾಜ್ ಕಟ್ಟೆಕಾರ್, ಪಿ. ಎ ಮೊಹಮ್ಮದ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.