ಸುಳ್ಯ

ರಂಗಮನೆಯಲ್ಲಿ ಯಶಸ್ವಿ ಕೋವಿಡ್ ಲಸಿಕಾ ಕಾರ್ಯಕ್ರಮ

ಸುಳ್ಯ:  ಹಳೆಗೇಟು 5 ನೇ ವಾರ್ಡ್ ನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ, ಲಸಿಕಾ ಮೇಳದ ಅಂಗವಾಗಿ  ಸಮುದಾಯ ಆರೋಗ್ಯ ಕೇಂದ್ರ, ಸುಳ್ಯ ಇದರ ವತಿಯಿಂದ ಕೋವಿಡ್ ಲಸಿಕಾ ಕಾರ್ಯಕ್ರಮವು ಯಶಸ್ವಿಯಾಗಿ ಸೋಮವಾರ ನಡೆಯಿತು.

ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಬುದ್ಧ ನಾಯ್ಕ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯ,ಸುಜನಾ  ಸುಳ್ಯ, ಕೇಶವ ಮಾಸ್ಟ್ರು ಹೊಸಗದ್ದೆ, ಅಜೀಜ್ ಹಳೆಗೇಟು,ದೇವದಾಸ್ ಓಡಬಾಯ್, ಕಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿಗಳಾದ ಲೀಲಾವತಿ ಮತ್ತು ಯಶಿಕಾ,ಅಂಗನವಾಡಿ ಕಾರ್ಯಕರ್ತೆಯರಾದ ತಿರುಮಲೇಶ್ವರಿ ಮತ್ತು ರತಿಕುಮಾರಿ ಉಪಸ್ಥಿತರಿದ್ದರು. ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್ ಮತ್ತು ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕಂದಡ್ಕ ಭೇಟಿ ನೀಡಿದರು. ಎಲ್ಲ ಲಸಿಕಾಕಾಂಕ್ಷಿಗಳಿಗೆ ರಂಗಮನೆಯ ವತಿಯಿಂದ ಸಿಹಿ ಹಂಚಲಾಯಿತು. ಚಿದಾನಂದ ವಿದ್ಯಾನಗರ ಮತ್ತು ಅರುಣ ವಿದ್ಯಾನಗರ,ಸಂತೃಪ್ತಿ ನಾಯಕ್, ಮನುಜ ನೇಹಿಗ ವಿಶೇಷವಾಗಿ ಸಹಕರಿಸಿದರು.

Related posts

ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆ ಇಲ್ಲ ಎಂದ ಕೆಎಂಎಫ್..! ಏನಿದು ವದಂತಿ..?

ಕಡಬ:ಇಬ್ಬರನ್ನು ಬಲಿ ಪಡೆದ ರೆಂಜಿಲಾಡಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷ ,ದೊಡ್ಡ ಆನೆಯೊಂದಿಗೆ ಸಂಚರಿಸುತ್ತಿರುವ ಮರಿಯಾನೆ-ವಿಡಿಯೋ ವೈರಲ್

ಸುಳ್ಯ: ಭಾರತೀಯ ವೈದ್ಯಕೀಯ ವ್ಯವಸ್ಥೆ ವಿಭಾಗದ ಸದಸ್ಯರಾಗಿ ಕೆವಿಜಿ ಆಯುರ್ವೇದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ಮಿತಾ ವಿನಯರಾಜ್ ಮಡ್ತಿಲ ನೇಮಕ