ಸುಳ್ಯ

ಪತ್ರಕರ್ತರ ಸಮುದಾಯ ಭವನ ಕಾಮಗಾರಿ ಸ್ಥಳಕ್ಕೆ ಉದ್ಯಮಿ ಆರ್ ಕೆ ನಾಯರ್ ಭೇಟಿ: ಒಂದು ಲಕ್ಷ ರೂ. ಕೊಡುಗೆ

481
Spread the love

ಸುಳ್ಯ:ಗುಜರಾತಿನಲ್ಲಿ ಉದ್ಯಮಿಯಾಗಿರುವ ಸುಳ್ಯ ಜಾಲ್ಸೂರಿನವರಾದ ಆರ್ ಕೆ ನಾಯರ್ ಸುಳ್ಯ ಅಂಬೆಟಡ್ಕದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನದ ಸ್ಥಳಕ್ಕೆ ಭೇಟಿ ನೀಡಿದರು. ನ.25 ರಂದು ನೂತನ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾಮಗಾರಿಯನ್ನು ವೀಕ್ಷಿಸಿ ಶುಭ ಹಾರೈಸಿದರು.

ಪ್ರೆಸ್ ಕ್ಲಬ್ ಪದಾಧಿಕಾರಿಗಳು ಆರ್ ಕೆ ನಾಯರ್ ಅವರನ್ನು ಸ್ವಾಗತಿಸಿದರು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಒಂದು ಲಕ್ಷ ರೂಗಳ ಸಹಾಯ ಧನವನ್ನು ಈ ಸಂದರ್ಭದಲ್ಲಿ ಹಸ್ತಾಂತರ ಮಾಡಿದರು. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಕೊಡುಗೆ ಅನನ್ಯವಾದುದು.ಪತ್ರಕರ್ತರ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿ ಈ ಸಮಾಜಕಕ್ಕೆ ದೊರಕಲು ಪತ್ರಕರ್ತರಿಗೆ ಪೂರಕ ವ್ಯವಸ್ಥೆಗಳು ಕೂಡ ಅಗತ್ಯ. ಈ ಹಿನ್ನಲೆಯಲ್ಲಿ ಸುಳ್ಯದಲ್ಲಿ ಪತ್ರಕರ್ತರ ಸಮುದಾಯ ಭವನ ಆದಷ್ಟು ಶೀಘ್ರ ನಿರ್ಮಾಣವಾಗಿ ಲೋಕಾರ್ಪಣೆಯಾಗಲಿ. ಮೊದಲ ಕಂತಾಗಿ ಒಂದು ಲಕ್ಷ ರೂಗಳನ್ನು ನೀಡುತ್ತಿದ್ದೇನೆ.‌ ಮುಂದಿನ ದಿನಗಳಲ್ಲಿ ಪ್ರೆಸ್ ಕ್ಲಬ್ ನಿರ್ಮಾಣಕ್ಕೆ ಇನ್ನಷ್ಟು ಆರ್ಥಿಕ ನೆರವು ನೀಡುವುದಾಗಿ ಅವರು ಘೋಷಿಸಿದರು. ನೂತನ ಪ್ರೆಸ್ ಕ್ಲಬ್ ಸುತ್ತ ಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣ ಮಾಡುವಂತೆ ಅವರು ಸಲಹೆ ನೀಡಿದರು. ಆರ್ಥಿಕ ನೆರವನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರಿಗೆ ಆರ್ ಕೆ ನಾಯರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲು ಹೊದಿಸಿ, ಹಾರ ಹಾಕಿ ಅವರನ್ನು ಸನ್ಮಾನಿಸಲಾಯಿತು.

ಕಟ್ಟಡ ನಿರ್ಮಾಣದ ಗುತ್ತಿಗೆದಾರ ನೆಲ್ಸನ್ ಲಿಟ್ಲ್ ಪ್ಲವರ್, ಪ್ರಭಾಕರ ಜಾಲ್ಸೂರು, ಪ್ರೆಸ್‌ ಕ್ಲಬ್ ಕಾರ್ಯದರ್ಶಿ ಗಂಗಾಧರ‌ ಕಲ್ಲಪಳ್ಳಿ, ಕೋಶಾಧಿಕಾರಿ ಯಶ್ವಿತ್ ಕಾಳಮ್ಮನೆ ನಿರ್ದೇಶಕರಾದ ಗಂಗಾಧರ ಮಟ್ಟಿ, ಕೃಷ್ಣ ಬೆಟ್ಟ, ಗಿರೀಶ್ ಅಡ್ಪಂಗಾಯ, ಜೆ.ಕೆ.ರೈ, ಶಿವಪ್ರಸಾದ್ ಕೇರ್ಪಳ, ಶರೀಫ್ ಜಟ್ಟಿಪಳ್ಳ, ಸದಸ್ಯರಾದ ಸತೀಶ್ ಹೊದ್ದೆಟ್ಟಿ, ಶಿವಪ್ರಸಾದ್ ಆಲೆಟ್ಟಿ, ಪ್ರಜ್ಞಾ ಎಸ್ ನಾರಾಯಣ್ ಅಚ್ರಪ್ಪಾಡಿ, ವೆಂಕಟೇಶ್ ಮೇನಾಲ ಉಪಸ್ಥಿತರಿದ್ದರು. ಹರೀಶ್ ಬಂಟ್ವಾಳ್ ಸ್ವಾಗತಿಸಿ, ಗಂಗಾಧರ ಕಲ್ಲಪಳ್ಳಿ ವಂದಿಸಿದರು.

See also  ಸುಳ್ಯ: ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ನಿಲ್ಲುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಿದ ಪ್ರಕರಣ, ರಕ್ಷಾ ಸಮಿತಿ ಮನವಿಗೆ ವೈದ್ಯಾಧಿಕಾರಿಗಳ ಸ್ಪಂದನೆ
  Ad Widget   Ad Widget   Ad Widget   Ad Widget   Ad Widget   Ad Widget