ಸುಳ್ಯ

ಸುಳ್ಯ: ಕೊರೊನಾ ಪಾಸಿಟಿವ್ ಮಹಿಳೆಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ

1k

ಸುಳ್ಯ : ಕೊರೊನಾ ಪಾಸಿಟಿವ್ ಬಂದ ಮಹಿಳೆಯೊಬ್ಬರು ನಮಗೆ ವಾಸಿಸಲು ಮನೆ ಇಲ್ಲ ನಮಗೆ ಮನೆ ಕೊಡಿ ಎಂದು ತಾಯಿಯನ್ನು ಕರೆದುಕೊಂಡು ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಬಳೆ ವ್ಯಾಪಾರ ಮಾಡುವ ರಾಜೇಶ್ವರಿಯೇ ತನ್ನ ತಾಯಿಯೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಿದ ಮಹಿಳೆಯಾಗಿದ್ದಾರೆ. ರಾಜೇಶ್ವರಿ ಮತ್ತು ಅವರ ಗಂಡನಿಗೆ ಶನಿವಾರ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಬಳಿಕ ಅವರು ವ್ರದ್ದೆ ತಾಯಿಯನ್ನು ಗಾಂಧಿನಗರದ ಬಾಡಿಗೆ ಮನೆಯಲ್ಲಿ ಕೂಡಿ ಹಾಕಿ ಅಜ್ಜಿಗೆ ತಿಳಿಸದೆ ತೆರಳಿದ್ದರು. ಭಾನುವಾರ ಅಜ್ಜಿ ಬೊಬ್ಬೆ ಹೊಡೆಯುತ್ತಿರುವ ವಿಷಯ ಸ್ಥಳೀಯರಿಗೆ ಗೊತ್ತಾಗಿ ಪೊಲೀಸರಿಗೆ ತಿಳಿಸಿ ಕೋಣೆಯ ಬಾಗಿಲು ತೆರೆಯಲಾಯಿತು. ಬಳಿಕ ಆರೋಗ್ಯ ಇಲಾಖೆಯವರು ಸ್ಥಳೀಯರು ಅಜ್ಜಿಯನ್ನು ಉಪಚರಿಸಿದ್ದರು.

See also  ಮಂಗಳೂರು ನಗರ ಸೇರಿ ಹಲವೆಡೆ ತಂಪೆರೆದ ಮಳೆ, ಮುಂದಿನ ಎರಡು ದಿನಗಳ‌ ಕಾಲ ಮಳೆ ಸಾಧ್ಯತೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget