ಕರಾವಳಿ

ಸುಳ್ಯ -ಕೊಯನಾಡು ಸರ್ವೀಸ್ ವ್ಯಾನಿನಲ್ಲಿ ಯುವತಿ ಜತೆ ಕುಡುಕನ ಕಿರಿಕ್..ಮುಂದೆ ಆಗಿದ್ದೇನು ಗೊತ್ತಾ?

861

ಸುಳ್ಯ: ಇಲ್ಲೊಬ್ಬ ಕುಡುಕ ಕಂಠಪೂರ್ತಿಯಾಗಿ ಮದ್ಯಪಾನ ಮಾಡಿ ಸರ್ವೀಸ್ ವ್ಯಾನಿನೊಳಗೆ ಯುವತಿ ಜತೆ ಕಿರಿಕ್ ಮಾಡಿಕೊಂಡಿದ್ದಾನೆ. ಸುಳ್ಯದ ವ್ಯಾನ್ ನಿಲ್ದಾಣದ ಬಳಿ ಇತ್ತೀಚೆಗೆ ನಡೆದಿರುವ ಈ ಘಟನೆಯ ಫೋಟೋಗಳು ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಕುಡುಕ-ಯುವತಿ ನಡುವೆ ಮಾತಿನ ಚಕಮಕಿ ನಡೆದು ಮುಂದೆ ಅಲ್ಲೊಂದು ಹೈಡ್ರಾಮಾವೇ ನಡೆಯಿತು. ಮುಂದೆ ಆಗಿದ್ದೇನು ಅನ್ನುವ ಸ್ವಾರಸ್ಯಕರ ಘಟನೆ ಇಲ್ಲಿದೆ ಓದಿ.

ಏನಿದು ಘಟನೆ?

ಇತ್ತೀಚೆಗೆ ಸುಳ್ಯದ ಹಳೆ ಬಸ್ ನಿಲ್ದಾಣದ ಸಮೀಪವಿರುವ ವ್ಯಾನ್ ನಿಲ್ದಾಣದಲ್ಲಿ ಪೆರಾಜೆ, ಅರಂತೋಡು , ಸಂಪಾಜೆ ಮಾರ್ಗವಾಗಿ ಕೊಯನಾಡಿಗೆ ತೆರಳುವ ಸರ್ವೀಸ್ ವ್ಯಾನ್ ಎಂದಿನಂತೆ ಜನರ ಬರುವಿಕೆಗಾಗಿ ನಿಂತಿತ್ತು. ಈ ಸಂದರ್ಭದಲ್ಲಿ ವ್ಯಾನಿನ ಎದುರಿನ ಎಡಬದಿಯ ಸೀಟಿನಲ್ಲಿ (ಡ್ರೈವರ್ ಸೀಟಿನ ಪಕ್ಕದ್ದು) ಒಬ್ಬಳು ಯುವತಿ ಕೂತಿದ್ದಳು. ಅದೇ ಸೀಟಿನಲ್ಲಿ ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿಯೂಬ್ಬ ಬಂದು ಕುಳಿತುಕೊಂಡಿದ್ದಾನೆ. ಅದ್ಯಾಕೋ ಏನೋ ಹೊಟ್ಟೆಯೊಳಗೆ ಪರಮಾತ್ಮನ ಪ್ರವೇಶದಿಂದಾಗಿ ಕುಡುಕ ಯಕ್ಷಗಾನ ಹಾಡು, ಅರ್ಥಗಾರಿಕೆಯನ್ನು ಕುಳಿತಲ್ಲಿಂದಲೇ ಜೋರಾಗಿ ಹೇಳುತ್ತಿದ್ದ .

ಈತನ ಇಂಪಾದ ಧ್ವನಿಯಿಂದ ವ್ಯಾನಿ ನಲ್ಲಿ ಕುಳಿತಿದ್ದ ಸಹ ಪ್ರಯಾಣಿಕರಿಗೆ ವಿಪರೀತ ಕಿರಿಕಿರಿ ಎನಿಸಿದೆ. ಆದರೂ ಸಹಿಸಿಕೊಂಡು ಹೋಗಲಿ ಎಂದು ಎಲ್ಲರೂ ಸುಮ್ಮನಿದ್ದರು. ಆದರೆ ಕುಡುಕ ಕುಳಿತಿದ್ದ ಸೀಟಿನಲ್ಲಿದ್ದ ಹುಡುಗಿಗೆ ಮಾತ್ರ ಸುಮ್ಮನೆ ಕುಳಿತುಕೊಳ್ಳಲು ಆಗಲಿಲ್ಲ. ನನಗೆ ಇಲ್ಲಿಂದ ಹೋಗುವುದಕ್ಕೆ ಜಾಗಬಿಡಿ ಎಂದು ಕೇಳಿದ್ದಾಳೆ. ಈ ನಡುವೆ ಇಬ್ಬರ ಒಳಗೆ ವಾಗ್ವಾದ ನಡೆದಿದೆ. ಅಂತಿಮವಾಗಿ ಕುಡುಕ ಕಷ್ಟದಿಂದಲೇ ದಾರಿ ಬಿಟ್ಟು ಕೊಟ್ಟ. ಆಕೆ ಮತ್ತೊಂದು ಸೀಟಿನಲ್ಲಿ ಹೋಗಿ ಕುಳಿತಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಕುಡುಕ ಭಾಗವತಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಯುವತಿ ಜತೆ ಪೂರ್ಣ ಕಿರಿಕ್ ಗೆ ನಿಂತಿದ್ದಾನೆ. ಆಕೆ ಕುಳಿತ ಮತ್ತೊಂದು ಸೀಟಿನ ಪಕ್ಕದಲ್ಲಿ ಕುಳಿತು ಚರಿಪಿರಿ ಆರಂಭಿಸಿದ್ದಾನೆ. ದೂರದಿಂದಲೇ ಇದನ್ನೆಲ್ಲ ಸೂಕ್ಷ್ಮವಾಗಿ ನೋಡುತ್ತಿದ್ದ ವ್ಯಾನ್ ಚಾಲಕ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತು ಕುಡುಕನಿಗೆ ಚೆನ್ನಾಗಿ ಕ್ಲಾಸ್ ಕೊಟ್ಟು ವ್ಯಾನಿನಿಂದ ಕೆಳಕ್ಕೆ ಇಳಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯನ್ನು ವಿವರಿಸಿದ್ದಾರೆ.

See also  ಬೆಟ್ಟದ ನೆಲ್ಲಿಕಾಯಿ ಮತ್ತು ಹಲವು ಪ್ರಯೋಜನಗಳನ್ನು ತಿಳಿಯೋಣ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget