ಕರಾವಳಿ

ವಾರದಿಂದ ಪಾಠವಿಲ್ಲದೆ ಸುಳ್ಯದ ಕೊಡಿಯಾಲ್ ಬೈಲ್ ಸರಕಾರಿ ಕಾಲೇಜು ಮಕ್ಕಳ ಪರದಾಟ..!

700

ಸುಳ್ಯ: ಕಳೆದೊಂದು ವಾರದಿಂದ ಸುಳ್ಯ ಕೊಡಿಯಾಲ್ ಬೈಲ್ ಕಾಲೇಜಿನ ಮಕ್ಕಳು ಸರಿಯಾಗಿ ತರಗತಿಗಳಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ನಿರತರಾಗಿರುವುದರಿಂದ ಮಕ್ಕಳ ಭವಿಷ್ಯದ ಮೇಲೆ ಭಾರಿ ಪರಿಣಾಮ ಬೀರಿದೆ.

ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕೆಂದು ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ ಸುಳ್ಯದಲ್ಲಿರುವ ಅತಿಥಿ ಉಪನ್ಯಾಸಕರೂ ಕೂಡ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಕ್ಲಾಸ್ ಗಳಿಗೆ ಹಾಜರಾಗುತ್ತಿಲ್ಲ. ಇದರಿಂದ ಮಕ್ಕಳಿಗೆ ದಿನವಿಡೀ ತರಗತಿಯೇ ಇಲ್ಲದಂತಾಗಿದೆ. ಕಾಲೇಜಿಗೆ ಸುಮ್ಮನೆ ಹೋಗಿ ಸಂಜೆವರೆಗೆ ಕ್ರೀಡಾಂಗಣದಲ್ಲಿ ಆಟವಾಡಿಕೊಂಡು ಮಕ್ಕಳು ಮನೆಗೆ ಬರುತ್ತಿದ್ದಾರೆ. ಕೂಡಲೇ ಶಿಕ್ಷಕರು ಪ್ರತಿಭಟನೆ ನಿಲ್ಲಿಸಿ ತರಗತಿಗೆ ಹಾಜರಾಗಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

See also  ಸ್ವಿಫ್ಟ್‌ ಕಾರಿಗೆ 3,000 ರೂ. ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಗೋ ಕಳ್ಳರು ಪರಾರಿ..! ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ವಂಚಕರ ಕೃತ್ಯ
  Ad Widget   Ad Widget   Ad Widget   Ad Widget   Ad Widget   Ad Widget   Ad Widget