ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಬೈಕ್ ಗೆ ತುಂಡಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿಯೊಂದು ಸಿಕ್ಕಿ ಬೈಕ್ ಸವಾರ ಪಲ್ಟಿಯಾಗಿರುವ ಘಟನೆ ಸುಳ್ಯದ ಐವರ್ನಾಡು ಸಮೀಪದಿಂದ ವರದಿಯಾಗಿದೆ. ಜೂ.26ರಂದು ದುರ್ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದ ಸವಾರನನ್ನು ತಕ್ಷಣ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆಯೊಯ್ಯಲಾಗಿದೆ ಎಂದು ತಿಳಿದು ಬಂದಿದೆ.