ಕಡೂರು: ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸಿ ಆರು ತಿಂಗಳ ಹಿಂದೆಯಷ್ಟೇ ವರ್ಗಾವಣೆಗೊಂಡಿದ್ದ ಫಾರೆಸ್ಟ್ ಗಾರ್ಡ್ ಶರತ್ (33 ವರ್ಷ) ನಿಗೂಢವಾಗಿ ಸಾವನ್ನಪ್ಪಿದ್ದಾರೆ. 9 ದಿನಗಳಿಂದ ಶರತ್ ನಾಪತ್ತೆಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ನೀಲಗಿರಿ ಪ್ಲಾಂಟೆಶನ್ ನಲ್ಲಿ ತೀವ್ರ ಹುಡುಕಾಟ ನಡೆದಿತ್ತು. ಇದೀಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ನೀಲಗಿರಿ ಪ್ಲಾಂಟೇಶನ್ ಒಳಗಡೆ ಸಿಕ್ಕಿದೆ. ಸಾವಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಶರತ್ ಮೂಲತಃ ಕೊಡಗಿನ ಮಡಿಕೇರಿ ತಾಲೂಕಿನ ಕಾಲೂರಿನವರು. ನಾಪತ್ತೆಯಾದ ದಿನದಿಂದ ಅವರಿಗಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಇವರ ಬೈಕ್, ಬಟ್ಟೆಗಳು ನೀಲಗಿರಿ ಪ್ಲಾಂಟೆಶನ್ ನಲ್ಲಿ ಸಿಕ್ಕಿದೆ. ಅಸುಪಾಸಿನ ಎರಡು ಕಿ.ಮೀ. ಒಳಗೆ ಮೃತದೇಹ ಸಿಕ್ಕಿದೆ ಎಂದು ತಿಳಿದು ಬಂದಿದೆ.