ಸುಳ್ಯ

ಸುಳ್ಯ: ಕೆರೆಗೆ ಬಿದ್ದು ಮೃತಪಟ್ಟ ಮಗು, ಮಗುವನ್ನು ರಕ್ಷಿಸಲು ಹೋದ ತಾಯಿಯೂ ದುರಂತ ಸಾವು

36

ಸುಳ್ಯ : ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಮಪಳಕಾಜೆ ಎಂಬಲ್ಲಿ ತಾಯಿ ಮಗು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಮಾಪಲಕಜೆ ಸಂಗೀತ ಹಾಗೂ ಅವರ ಮಗು ಮನೆಯ ಪಕ್ಕದ ಕೆರೆಗೆ ಬಿದ್ದು  ಸಾವನ್ನಪ್ಪಿದವರಾಗಿದ್ದಾರೆ. ಮೊದಲು ಮಗು ಕೆರೆಗೆ ಬಿತ್ತು, ಹೀಗಾಗಿ ಮಗುವನ್ನು  ಎತ್ತಲು ತಾಯಿ ಕೂಡ ಕೆರೆಗೆ ಹಾರಿದರು ಎನ್ನಲಾಗಿದೆ. ಬಳಿಕ ಮಗುವನ್ನು ಕೆರೆಯಿಂದ ಎತ್ತಲಾಗದೆ ತಾಯಿಯೂ  ಮೇಲೆ ಎಳಲಾಗದೆ  ಇಬ್ಬರೂ ಸಾವನ್ನಪ್ಪಿದರು.ಇದೀಗ ಇಬ್ಬರ ಶವವನ್ನೂ ಮೇಲಕ್ಕೆ ಎತ್ತಲಾಗಿದೆ ಎಂದು ತಿಳಿದು ಬಂದಿದೆ.