ಬೆಳ್ಳಾರೆ: ಕೊಡಿಯಾಲ ಗ್ರಾಮದ ಬಾಚೋಡಿ ಅಂಗನವಾಡಿ ಕಾರ್ಯಕರ್ತೆ ಶ್ರೀ ಮತಿ ವಸಂತಿ ಪೈ ಯವರು ಜುಲೈ 31 ರಂದು ಸೇವಾ ನಿವೃತ್ತಿ ಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸ್ತ್ರೀ ಶಕ್ತಿ ಸಂಘದ ವತಿಯಿಂದ ಇಂದು ಸನ್ಮಾನಿಸಲಾಯಿತು. 36 ವರ್ಷಗಳ ತನ್ನ ಸೇವಾ ಅವಧಿಯಲ್ಲಿ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಪತಿ ವೆಂಕಟೇಶ್ ಪೈ ಪ್ರಗತಿ ಪರ ಕೃಷಿಕರಾಗಿದ್ದಾರೆ. ಪುತ್ರ ವಿನಯ ಚಂದ್ರ ಪೈ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಪುತ್ರಿ ವಿಜೇತ ಅವರನ್ನು ವಿವಾಹ ಮಾಡಿ ಕೊಡಲಾಗಿದೆ. ಕಾರ್ಯಕ್ರಮದಲ್ಲಿ ಗೊಂಚಲಿನ ಅಧ್ಯಕ್ಷೆ ಶ್ರೀಮತಿ ಯಶೋಧಾ, ಕೋಶಾಧಿಕಾರಿ ಶ್ರೀ ಮತಿ ಕಮಲಾಕ್ಷಿ, ಗ್ರಾಮಪಂಚಾಯತ್ ಸದಸ್ಯೆ ಶ್ರೀ ಮತಿ ವಿಜಯಕುಮಾರಿ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.