ಕ್ರೈಂ

ಬೆಳ್ಳಾರೆ: ಚಿಲ್ಲರೆ ಗಲಾಟೆ, ಕೆ ಎಸ್ ಆರ್ ಟಿ ಸಿ ಬಸ್ ಕಂಡೆಕ್ಟರ್ ಕೆನ್ನೆಗೆ ಬಾರಿಸಿದ ಪ್ರಯಾಣಿಕ..!

380
Spread the love

ಬೆಳ್ಳಾರೆ: ಚಿಲ್ಲರೆ ವಿಚಾರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕನಿಗೆ ಪ್ರಯಾಣಿಕರೊಬ್ಬರು ಗೂಸ ನೀಡಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಿಂದ ವರದಿಯಾಗಿದೆ. ಇಬ್ಬರ ನಡುವಿನ ಗಲಾಟೆ ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ವಿವಾದಕ್ಕೆ ಕಾರಣವಾಯಿತು.

ಏನಿದು ಘಟನೆ?

ಸುಳ್ಯದಿಂದ ಬೆಳಿಗ್ಗೆ ಬೆಳ್ಳಾರೆ ಕಡೆಗೆ ಹೋಗುವ ಬಸ್ಸಿಗೆ ಐವರ್ನಾಡಿನಲ್ಲಿ ಪುರುಷೋತ್ತಮ ಎಂಬವರು ಬಸ್ ಹತ್ತಿದರೆನ್ನಲಾಗಿದೆ.

ಬಸ್ಸಿನಲ್ಲಿ ನಿರ್ವಾಹಕ ಟಿಕೆಟ್ ನೀಡುವಾಗ ಪ್ರಯಾಣಿಕನು ರೂ.100 ರ ನೋಟನ್ನು ನೀಡಿದರೆನ್ನಲಾಗಿದೆ. ನಿರ್ವಾಹಕ ವಸಂತ ಕೆ.ಆರ್.ಎಂಬವರು ರೂ.100 ಪಡೆದುಕೊಂಡು ಚಿಲ್ಲರೆ ಮತ್ತೆ ಕೊಡುವುದಾಗಿ ಟಿಕೆಟ್ ಹಿಂಬದಿಯಲ್ಲಿ 90 ಕೊಡಲು ಬಾಕಿ ಇದೆ ಎಂದು ಬರೆದರೆನ್ನಲಾಗಿದೆ. ಬೆಳ್ಳಾರೆ ಬಸ್‌ ಸ್ಟ್ಯಾಂಡ್ ಬರುವಾಗ ಪ್ರಯಾಣಿಕರು ಚಿಲ್ಲರೆಯನ್ನು ನಿರ್ವಾಹಕನ ಜೊತೆ ಕೇಳಿದ್ದು ನಿರ್ವಾಹಕನಲ್ಲಿ ಚಿಲ್ಲರೆ ಇಲ್ಲದೆ ಪಕ್ಕದ ಅಂಗಡಿಯಲ್ಲಿ ಕೇಳಿ ಬರುವುದಾಗಿ ಹೇಳಿ ಹೋಗಿದ್ದಾರೆ. ಅಂಗಡಿಯಲ್ಲಿ ಚಿಲ್ಲರೆ ಪಡೆದು ಬರುವಾಗ ತಡವಾಯಿತೆನ್ನಲಾಗಿದೆ.

ಪುರುಷೋತ್ತಮರಿಗೆ ಬೆಳ್ಳಾರೆ ಯಿಂದ ಪುತ್ತೂರು ಹೋಗಲಿಕ್ಕಿದ್ದು ಆಗಲೇ ಬಸ್‌ ಸ್ಟ್ಯಾಂಡ್ ನಿಂದ ಪುತ್ತೂರು ಬಸ್ ಹೊರಟಿದ್ದು ಇವರಿಗೆ ಚಿಲ್ಲರೆ ಸಿಗುವಾಗ ಬಸ್ ತಪ್ಪಿತೆನ್ನಲಾಗಿದೆ. ಇದರಿಂದ ಕೋಪಗೊಂಡ ಪ್ರಯಾಣಿಕ ನಿರ್ವಾಹಕನ ಜೊತೆ ಮಾತಿಗಿಳಿದಿದ್ದು ಮಾತಿಗೆ ಮಾತು ಬೆಳೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದನೆನ್ನಲಾಗಿದೆ. ಈ ಬಗ್ಗೆ ಬಸ್ ಕಂಡಕ್ಟರ್ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಬಸ್ ಪ್ರಯಾಣಿಕ ಪುರುಷೋತ್ತಮರವರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.

See also  13 ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದದ್ದೇಗೆ ಮುರುಘಾ ಶ್ರೀ?ತನಿಖಾಧಿಕಾರಿಗಳ ತಪ್ಪಿನಿಂದ ಸ್ವಾಮೀಜಿ ರಿಲೀಸ್ ಎಂದದ್ದೇಕೆ ಒಡನಾಡಿ ಸಂಸ್ಥೆಯ ಮುಖ್ಯಸ್ಥ ?
  Ad Widget   Ad Widget   Ad Widget   Ad Widget   Ad Widget   Ad Widget