ಕ್ರೈಂ

ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿ ಹಣ ಕದ್ದು ರವಕೆಯಲ್ಲಿ ಬಚ್ಚಿಟ್ಟ ಕಳ್ಳಿ..!

700

ಸುಬ್ರಹ್ಮಣ್ಯ: ಇಲ್ಲಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಹುಂಡಿ ಹಣ ಎಣಿಕೆ ಮಾಡುವ ವೇಳೆ ಮೆತ್ತಗೆ ಹಣ ಲಪಟಾಯಿಸಿದ ಮಹಿಳೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ.

ಈ ಘಟನೆ ಜ.27 ರಂದು ನಡೆದಿದೆ ಎನ್ನಲಾಗಿದೆ. ಹುಂಡಿ ಎಣಿಕೆಯ ಸಂದರ್ಭ ಮಹಿಳೆಯೊಬ್ಬರು ಮೆಲ್ಲಗೆ ಹಣ ಕಳ್ಳತನ ನಡೆಸಿ ತನ್ನ ರವಿಕೆಯೊಳಗೆ ಬಚ್ಚಿಟ್ಟಿದ್ದರೆನ್ನಲಾಗಿದೆ.  ಇದನ್ನು ಗಮನಿಸಿದ ಕರ್ತವ್ಯ ನಿರತ ಸೆಕ್ಯೂರಿಟಿಯವರು  ಅಧಿಕಾರಿಗಳ ಗಮನಕ್ಕೆ ತಂದಿದ್ದು  ಕಾರ್ಯನಿರ್ವ ಹಣಾಧಿಕಾರಿ ಅವರ  ದೂರಿನಂತೆ ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಗಿದೆ.   ಮಹಿಳೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಪೊಲೀಸರು ಮಹಿಳೆಯನ್ನು  ಮಂಗಳೂರಿನ ರಿಮಾಂಡ್ ಹೋಂ ನಲ್ಲಿ ಇರಿಸಿದ್ದು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

See also  ರಾಜ್ಯ ಮಹಿಳಾ ಆಯೋಗದಿಂದ ದರ್ಶನ್ ಗೆ ಮತ್ತೆ ನೋಟಿಸ್..! ನೋಟಿಸ್ ನಲ್ಲಿ ನೀಡಿದ ಎಚ್ಚರಿಕೆ ಏನು..?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget