ಕ್ರೈಂ

ಸುಬ್ರಹ್ಮಣ್ಯ: ಬಿಸಿಲೆ ಘಾಟ್ ನಲ್ಲಿ ಅಪರಿಚಿತ ವ್ಯಕ್ತಿ ವಿಷ ಸೇವಿಸಿ ಸಾವು

357
Spread the love

ಸುಬ್ರಹ್ಮಣ್ಯ :  ಬಿಸಿಲೆ ಘಾಟ್ ನ ರಸ್ತೆಯ ಬದಿ ಇರುವ ನದಿಯ ಸಮೀಪ ಅಪರಿಚಿತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಯುವ ತೇಜಸ್ಸು ಸಂಸ್ಥೆಯ ಗರಿಷ್ಠ ಪ್ರಯತ್ನದ ಹೊರತಾಗಿಯೂ ವ್ಯಕ್ತಿ ನಿಧನರಾಗಿದ್ದಾರೆ.

ಬಿಸಿಲೆ ಘಾಟ್ ನ ಚೌಡೇಶ್ವರಿ ಅಮ್ಮನವರ ಗುಡಿಯಿಂದ ಸುಮಾರು 100 ಮೀಟರ್ ಇಳಿಜಾರಿನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಗಮನಕ್ಕೆ ಬಂದು ಕೂಡಲೇ ಸುಬ್ರಮಣ್ಯದ ಯುವತೇಜಸ್ಸು ಟ್ರಸ್ಟ್ ಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಯುವ ತೇಜಸ್ಸು ತಂಡದ ಸದಸ್ಯರು ಆಂಬ್ಯುಲೆನ್ಸ್ ಸಮೇತ ಸ್ಥಳಕ್ಕೆ ತೆರಳಿದ್ದು ಸುಮಾರು 60-70 ಆಸುಪಾಸಿನ ವ್ಯಕ್ತಿಯೊಬ್ಬರು ಸಂಪೂರ್ಣ ನಗ್ನವಾಗಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.

ಕೂಡಲೇ ಆ ವ್ಯಕ್ತಿಯನ್ನು ಸುಬ್ರಮಣ್ಯ ಸರಕಾರಿ ಆಸ್ಪತೆಗೆ ಕರೆತಂದು, ಬಳಿಕ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಈ ವೇಳೆ ದಾರಿ ಮಧ್ಯೆಯೇ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.

See also  ಉಪ್ಪಿನಂಗಡಿ: ಮಗನ ಹುಟ್ಟುಹಬ್ಬಕ್ಕೆಂದು ಕಡವೆಯನ್ನು ಬೇಟೆಯಾಡಿದ ವ್ಯಕ್ತಿ..! ಕೋವಿ ಮತ್ತು ಮಾಂಸ ಅಣ್ಯಾಧಿಕಾರಿಗಳ ವಶಕ್ಕೆ..!
  Ad Widget   Ad Widget   Ad Widget   Ad Widget   Ad Widget   Ad Widget