Latestವೈರಲ್ ನ್ಯೂಸ್ಸಿನಿಮಾ

ಸ್ಟಾರ್ ನಟ ಮಮ್ಮುಟ್ಟಿಗೆ ಕ್ಯಾನ್ಸರ್..? ಈ ಬಗ್ಗೆ ನಟನ ಪಿಆರ್ ಟೀಮ್ ಹೇಳಿದ್ದೇನು..?

895
Spread the love

ನ್ಯೂಸ್ ನಾಟೌಟ್: ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿಗೆ (Mammootty) ಕ್ಯಾನ್ಸರ್ ಆಗಿದೆ ಎಂಬ ಸುಳ್ಳು ವದಂತಿ ಹಬ್ಬಿದ ಬೆನ್ನಲ್ಲೇ ಪಿ.ಆರ್ ಟೀಮ್ ನಟನ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದೆ. ಆ ರೀತಿ ಏನು ಇಲ್ಲ, ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ.

ಇದು ಸುಳ್ಳು. ರಂಜಾನ್ ಉಪವಾಸದ ಕಾರಣದಿಂದ ಅವರು ಶೂಟಿಂಗ್‌ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ರಂಜಾನ್ ಮುಗಿಯುತ್ತಿದ್ದಂತೆ ಶೂಟಿಂಗ್‌ ಗೆ ಮರಳುತ್ತಾರೆ ಎಂದು ಪಿಆರ್ ಟೀಮ್ ಹೇಳಿದೆ. ಸುಳ್ಳು ವದಂತಿಗೆ ಕಿವಿಗೊಡಬೇಡಿ ಎಂದು ಮಮ್ಮುಟ್ಟಿ ತಂಡ ಸ್ಪಷ್ಟನೆ ನೀಡಿದೆ.

73 ವರ್ಷದ ನಟ ಮಮ್ಮುಟ್ಟಿಗೆ ಕ್ಯಾನ್ಸರ್ ಆಗಿದೆ, ಹೀಗಾಗಿ ಅವರು ಸಿನಿಮಾ ಶೂಟಿಂಗ್‌ನಿಂದ ದೂರ ಇದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ಪೋಸ್ಟ್‌ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದರಿಂದ ನಟನ ಫ್ಯಾನ್ಸ್ ಗಾಬರಿಯಾಗಿದ್ದರು. ಆದರೀಗ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿಮಧ್ಯಾಹ್ನದ ಬಿಸಿಯೂಟದ ಬಗ್ಗೆ ಮಹತ್ವದ ಸೂಚನೆ..! ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ ಪತ್ರ..!  

See also  30ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ..!ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget   Ad Widget   Ad Widget   Ad Widget