ನ್ಯೂಸ್ ನಾಟೌಟ್: ಕಾಲಿವುಡ್ ನಟ ದಳಪತಿ ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಈಗಾಗಲೇ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಹೋದಲ್ಲೆಲ್ಲ ಜನರು ಸೇರುತ್ತಿದ್ದಾರೆ. ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಆಸೆ ಇರುವ ಹುಚ್ಚು ಅಭಿಮಾನಿಗಳು ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮಾಡುತ್ತಿದ್ದಾರೆ. ವಿಜಯ್ ಅವರನ್ನು ನೋಡಲು ಅಭಿಮಾನಿಯೊಬ್ಬ ಮರದಿಂದ ಪ್ರಚಾರ ನಡೆಸುತ್ತಿದ್ದ ವಾಹನಕ್ಕೆ ಜಿಗಿದಿದ್ದಾನೆ.
ದಳಪತಿ ವಿಜಯ್ ಶನಿವಾರ (ಏಪ್ರಿಲ್ 26) ಕೊಯಮತ್ತೂರಿನಲ್ಲಿ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ವ್ಯಾನ್ ಮೇಲೆ ನಿಂತು ಜನರತ್ತ ಕೈ ಬೀಸುತ್ತಿದ್ದರು. ಆ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಮರದಿಂದ ಜಿಗಿದು ವಾನ್ ಏರಿದ್ದಾನೆ. ಆತನ ವರ್ತನೆಯಿಂದ ವಿಜಯ್ ಗೆ ಒಂದು ಕ್ಷಣ ಶಾಕ್ ಆಯಿತು. ಬಳಿಕ ಪಕ್ಷದ ಸ್ಕಾರ್ಫ್ ನೀಡಿ, ಆತನನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.
#WATCH | திடீரென மரத்தில் இருந்து தாவிய தொண்டர்.. பதறிப் போன தவெக தலைவர் விஜய்#SunNews | #TVKVijay | #Coimbatore pic.twitter.com/kMMeznkNaE
— Sun News (@sunnewstamil) April 26, 2025
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಹಲವರು ಈ ವರ್ತನೆಯ ಬಗ್ಗೆ ಟೀಕೆ ಮಾಡಿದ್ದಾರೆ.