Latestರಾಜ್ಯಶಿಕ್ಷಣ

ಇಂದು ಬೆಳಗ್ಗೆ SSLC ಫಲಿತಾಂಶ ಪ್ರಕಟ, ಫಲಿತಾಂಶ ನೋಡೋದು ಹೇಗೆ..? ಇಲ್ಲಿದೆ ಡಿಟೇಲ್ಸ್

513
Representative image

ನ್ಯೂಸ್ ನಾಟೌಟ್: 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಲಿದೆ.

ಇಂದು ಬೆಳಗ್ಗೆ 11:30 ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶ ಪ್ರಕಟಿಸಲಿದ್ದಾ karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ಇದೇ ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನಡೆದಿತ್ತು. ಮಾ.21ರಿಂದ ಏ.4 ರ ವರೆಗೆ ರಾಜ್ಯಾದ್ಯಂತ 2,818 ಕೇಂದ್ರಗಳಲ್ಲಿ 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ನೀಡಿದ್ದ ಶೇ.10 ರಷ್ಟು ಹೆಚ್ಚುವರಿ ಗ್ರೇಸ್ ಅಂಕ ವ್ಯವಸ್ಥೆಯನ್ನು ಈ ಬಾರಿ ಕೈಬಿಡಲಾಗಿದೆ. ಕಳೆದ ಬಾರಿ ಹೆಚ್ಚು ಗ್ರೇಸ್‌ ಅಂಕ ನೀಡಿದ್ದರೂ ಶೇ.10 ಫಲಿತಾಂಶ ಕುಸಿದಿತ್ತು. ಈ ಬಾರಿ ಫಲಿತಾಂಶದ ಬಗ್ಗೆ ಕುತೂಹಲ ಮೂಡಿದೆ.

See also  ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬಜೆಟ್ ನಲ್ಲಿ ಸಿಎಂ ಅಸ್ತು, ಕೊಡಗಿನ ವಿರಾಜಪೇಟೆಯಲ್ಲೂ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆ..!
  Ad Widget   Ad Widget   Ad Widget   Ad Widget