ಸುಳ್ಯ

ಕೇಂದ್ರದ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪಿವೆ: ಹರೀಶ್ ಕಂಜಿಪಿಲಿ

ಸುಳ್ಯ: ಕೇಂದ್ರದ ಯೋಜನೆಗಳು ಇಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ  ಸರಿಯಾಗಿ ತಲುಪುತ್ತಿದೆ. ಯೋಜನೆಗಳ ಸರಿಯಾದ ಮಾಹಿತಿಯನ್ನು  ಕಾರ್ಯಕರ್ತರು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದರು. ಸುಳ್ಯ ಸಿ.ಎ ಬ್ಯಾಂಕ್ ಹಾಲ್ ನಲ್ಲಿ ನಡೆದ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೆ ಈಗ ಬಿಜೆಪಿ ಸರಕಾರವೇ ಇದೆ. ಇದರ ಹಿಂದೆ ಅನೇಕ ಹಿರಿಯರ ತ್ಯಾಗ ಬಲಿದಾನವಿದೆ ಎಂದರು. ತಾಲೂಕು ಹಿಂದುಳಿದ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಆರ್.ಟಿ. ನಾರಾಯಣ, ಉದಯಕುಮಾರ್ ಮೊದಲಾದವರಿದ್ದರು. ನವೀನ್ ಸಾರಕೆರೆ ಸ್ವಾಗತಿಸಿ ಚಂದ್ರಶೇಖರ ಕೇರ್ಪಳ ನಿರೂಪಿಸಿದರು.

Related posts

ನುರಿತ ಕಂಪ್ಯೂಟರ್ ಶಿಕ್ಷಕಿ ಬೇಕಾಗಿದ್ದಾರೆ

ಮೋಂಟಡ್ಕದಲ್ಲಿ ತೋಟದ ಕೆರೆಗೆ ಬಿದ್ದ ಕಾಡುಕೋಣ

ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಸುಳ್ಯದ ಯುವಕ ಸಿದ್ಧ- ಮಹಾರಾಷ್ಟ್ರಕ್ಕೆ ತೆರಳಲಿರುವ ನಾಲ್ಕೂರಿನ ಜೀವನ್ ಚತ್ರಪ್ಪಾಡಿ