ಬೆಂಗಳೂರು

ಮಾಜಿ ಸೈನಿಕನಿಗೆ ಅಪಮಾನ: ಮಾಜಿ ಸೈನಿಕರಿಂದ ರಾಷ್ಟ್ರಧ್ವಜ ಹಿಡಿದು ನೆಲಮಂಗಲ ಟೋಲ್ ಗೆ ಮುತ್ತಿಗೆ

567
Spread the love

ನೆಲಮಂಗಲ: ಮಾಜಿ ಸೈನಿಕರೊಬ್ಬರಿಗೆ ನೆಲಮಂಗಲದ ಟೋಲ್ ಸಿಬ್ಬಂದಿ ಅಪಮಾನ ಮಾಡಿದ್ದನ್ನು ಖಂಡಿಸಿ ರಾಜ್ಯಾಧ್ಯಕ್ಷ ಡಾ ಶಿವಣ್ಣ ನೇತೃತ್ವದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದವರು ಭಾನುವಾರ ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮಾಜಿ ಸೈನಿಕರಿಗೆ ಅಪಮಾನ ಮಾಡಿದ ಸಿಬ್ಬಂದಿಯನ್ನು ಕೂಡಲೇ ವಜಾ ಮಾಡುವಂತೆ ಇದೇ ವೇಳೆ ಅಧಿಕಾರಿಗಳನ್ನು ಆಗ್ರಹಿಸಲಾಯಿತು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ಬಳಿಕ ಸ್ಥಳಕ್ಕೆ ಪೊಲೀಸರೇ ಟೋಲ್ ಅಧಿಕಾರಿಗಳನ್ನು ಕರೆಯಿಸಿದರು. ಮನವಿ ಸ್ವೀಕರಿಸಿದ ಟೋಲ್ ಮ್ಯಾನೇಜರ್‌ ಆನಂದ್ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಇದೇ ವೇಳೆ ಮಾಜಿ ಸೈನಿಕರಿಗೆ ಟೋಲ್ ಫ್ರೀ ಮಾಡುವ ಮನವಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸುತ್ತೇವೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಕುಮಾರ ಸ್ವಾಮಿ,ರಮೇಶ್, ಬೆಂಗಳೂರು ನಗರದ ಅಧ್ಯಕ್ಷರುಗಳಾದ ವೇಣು, ಬಸಪ್ಪ, ಶಿವ ಕುಮಾರ್‌ ಗೌಡ, ಖಜಾಂಚಿ ಜಯಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ರಮೇಶ್ ಗೌಡ, ಗಂಗಾಧರಯ್ಯ, ಸುರೇಶ್ ಹೆಸರಘಟ್ಟ, ಸಿಕೆ ರಮೇಶ್ ಸೇರಿದಂತೆ ಅರವತ್ತಕ್ಕೂ ಹೆಚ್ಚಿನ ಮಾಜಿ ಸೈನಿಕರು ಹಾಜರಿದ್ದರು.

See also  ದರ್ಶನ್ ಪ್ರಕರಣ: ಪ್ರತ್ಯಕ್ಷ ದರ್ಶಿಗಳನ್ನು ಹೊರತು ಪಡಿಸಿ ಬರೋಬ್ಬರಿ 200 ಕ್ಕೂ ಹೆಚ್ಚು ಸಾಕ್ಷಿಗಳ ಸಂಗ್ರಹ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget