Latest

Singer Kalpana: ಆತ್ಮಹತ್ಯೆಗೆ ಯತ್ನಿಸಿದ ಸ್ಟಾರ್ ಗಾಯಕಿ? ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆ!!ಕಲ್ಪನಾ ಗಂಡನ ವಿಚಾರಣೆ

371
Spread the love

ನ್ಯೂಸ್‌ ನಾಟೌಟ್:ಟಾಲಿವುಡ್ ಅಂಗಳದ ಸ್ಟಾರ್ ಸಿಂಗರ್ ಕಲ್ಪನಾ ಆತ್ಮಹತ್ಯೆಗೆ ಯತ್ನಿಸಿದ್ದಾರಾ? ಹೀಗೊಂದು ಅನುಮಾನ ಟಾಲ್ ವುಡ್‌ ಅಂಗಳದಲ್ಲಿ ಓಡಾಡುತ್ತಿದೆ.ಹೌದು, ಮಂಗಳವಾರ ಮಧ್ಯಾಹ್ನ ಪ್ರಕರಣ ಬೆಳಕಿಗೆ ಬಂದಿದೆ. ಎರಡು ದಿನದಿಂದ ಗಾಯಕಿ ಕಲ್ಪನಾ ಮನೆಯಿಂದ ಹೊರ ಬರದಿದ್ದಾಗ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ್ದ ಗಾಯಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಿಜಾಂಪೇಟೆಯ ವರ್ಟೆಕ್ಸ್ ಪ್ರಿವಿಲೇಜ್ ನಲ್ಲಿ ಗಾಯಕಿ ಕಲ್ಪನಾ ವಾಸವಾಗಿದ್ದರು. ಪೊಲೀಸರು ಬಂದು ಬೆಲ್ ಮಾಡಿದಾಗಲೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಾಗಿಲು ಒಡೆದು ಒಳಗೆ ಹೋಗಿ ನೋಡಿದ್ರೆ ಕಲ್ಪನಾ ಬೆಡ್ ಮೇಲೆ ಪ್ರಜ್ಞೆ ಇಲ್ಲದೇ ಬಿದ್ದಿರೋದು ಗಮನಕ್ಕೆ ಬಂದಿದೆ. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಆದ್ರೆ ಗಾಯಕಿ ಕಲ್ಪನಾ ಅವರ ಈ ನಿರ್ಧಾರಕ್ಕೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಕಲ್ಪನಾ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗಾಯಕಿ ಕಲ್ಪನಾ ಆತ್ಮಹತ್ಯೆಗೆ ಮುಂದಾಗಿದ್ರು ಎಂಬ ಅನುಮಾನಗಳಿವೆ. ಸದ್ಯ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಕಲ್ಪನಾ ರಿಫ್ರೆಶ್‌ಮೆಂಟ್‌ಗೋಸ್ಕರ ಒಂದಷ್ಟು ಮಾತ್ರೆ ತಗೊಳ್ತಿದ್ರಂತೆ, ಅದರ ಡೋಸ್ ಜಾಸ್ತಿಯಾದಕ್ಕೆ ಏನಾದ್ರೂ ಆಗಿದ್ಯಾ ಎಂಬ ಅನುಮಾನ ಸಹ ಮೂಡಿದೆ.ಎರಡು ದಿನದ ಹಿಂದೆಯಷ್ಟೇ ಗಂಡ ಮತ್ತೆ ಇನ್ನುಳಿದ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಲ್ಪನಾ ಒಬ್ಬರೇ ಮನೆಯಲ್ಲಿದ್ದರು.  ಎರಡು ದಿನದಿಂದ ಕಲ್ಪನಾ ಮನೆಯಿಂದ ಹೊರಗೆ ಬಂದಿರಲಿಲ್ಲ. ಅನುಮಾನ ಬಂದು ಸ್ಥಳೀಯರು ಪೊಲೀಸರಿಗೆ ಹೇಳಿದ್ದಾರೆ.  ಎರಡು ದಿನದಿಂದ ಅವರು ಮನೆಯಲ್ಲಿರುವ ವಿಷಯ ಬಹುಶಃ ಎಲ್ಲರಿಗೂ ಗೊತ್ತಿತ್ತು. ಕುಟುಂಬದ ಯಾವ ಸದಸ್ಯರು ಕಲ್ಪನಾರಿಗೆ ಕಾಲ್ ಮಾಡಿರಲಿಲ್ಲವಾ ಎಂಬ ಅನುಮಾನ ಮೂಡಿದೆ.  ಸದ್ಯಕ್ಕೆ ಪೊಲೀಸರು ಕಲ್ಪನಾ ಗಂಡನ ವಿಚಾರಣೆ ಮಾಡ್ತಿದ್ದಾರೆ. 

See also  ಮಾಲೀಕನನ್ನು ರಕ್ಷಿಸಲು ಹುಲಿಯ ಜತೆ ಹೋರಾಡಿದ್ದ ನಾಯಿ ಚಿಕಿತ್ಸೆ ಫಲಿಸದೆ ಸಾವು..! ಇಲ್ಲಿದೆ ಮನಕಲಕುವ ಘಟನೆ..!
  Ad Widget   Ad Widget   Ad Widget   Ad Widget   Ad Widget   Ad Widget