ಕ್ರೈಂ

ಕಡಬ: ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಮಡಿಕೇರಿಯ ಎಸ್.ಐ ಹೃದಯಾಘಾತದಿಂದ ನಿಧನ

736

ಕಡಬ: ಮಡಿಕೇರಿ ಯಲ್ಲಿ ಎಸ್.ಐ.ಆಗಿರುವ ಸುಳ್ಯ ತಾಲೂಕು ನಡುಗಲ್ಲು ನಿವಾಸಿ ಚಿನ್ನಪ್ಪ ನಾಯ್ಕ (59ವ.) ಡಿ.15 ರಂದು ಮುಂಜಾನೆ ಹೃದಯಾಘಾತದಿಂದ ನಿಧನ  ಹೊಂದಿದ್ದಾರೆ.

ರಜೆ ಹಿನ್ನೆಯಲ್ಲಿ  ಮನೆಯಲ್ಲಿದ್ದ ಅವರು   ಮುಂಜಾನೆ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತಾದರೂ  ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದ್ದಾರೆ ಎನ್ನಲಾಗಿದೆ. ಮೃತ ಚಿನ್ನಪ್ಪ ನಾಯ್ಕ ಅವರು ನವೆಂಬರ್ ತಿಂಗಳಿನಲ್ಲಿ ಎಸ್.ಐ.ಆಗಿ ಬಡ್ತಿಗೊಂಡಿದ್ದರು. ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದರು. ಕಡಬ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದ್ದು ಕಡಬ ಎಸ್.ಐ. ರುಕ್ಮ ನಾಯ್ಕ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

See also  ಕರ್ನಾಟಕದ ರಾಜ್ಯಪಾಲರನ್ನೇ ಬಿಟ್ಟು ಹಾರಿದ ವಿಮಾನ, ಏರ್ ಪೋರ್ಟ್‌ಗೆ ಇನ್ ಟೈಮ್‌ಗೆ ತಲುಪಿದ್ದರೂ ಥಾವರ್ ಚಂದ್ ಗೆಹ್ಲೋಟ್‌ ಗೆ ವಿಮಾನ ತಪ್ಪಿದ್ದು ಹೇಗೆ..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget