ಕ್ರೀಡೆ/ಸಿನಿಮಾ

ನಟ ಶಿವರಾಜ್ ಕುಮಾರ್ ಮತ್ತೊಂದು ಮುಖ ವೈರಲ್, ಜಾಲತಾಣದಲ್ಲಿ ಅಭಿಮಾನಿಗಳಾದ್ರು ಶಾಕ್..!

831

ಬೆಂಗಳೂರು: ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಾಗಿದೆ. ಸಿನಿಮಾದಲ್ಲಿ ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ. ‘ಟಗರು’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದು ವಿಶೇಷ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.

See also  ಮಾದಕ ನಟಿ, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ 'ಉರ್ಫಿ ಜಾವೇದ್‌'ಗೆ ಕೊಲೆ ಬೆದರಿಕೆ,ಅಷ್ಟಕ್ಕೂ ಮೇಲ್‌ಗೆ ಬಂದ ಆ ಸಂದೇಶ ಏನು? ಬೆದರಿಕೆ ಹಾಕಿದವರ್ಯಾರು?
  Ad Widget   Ad Widget   Ad Widget   Ad Widget   Ad Widget