ದೈವಾರಾಧನೆಪುತ್ತೂರು

ಪಾಳು ಬಿದ್ದ ಶಿವನ ದೇವಾಲಯದಲ್ಲಿ ಪುಂಡ ಪೋಕರಿಗಳ ಅಟ್ಟಹಾಸ!ಮೈಸೂರು ಮಹಾರಾಜರು ಕಟ್ಟಿಸಿದ ದೇವಾಲಯಕ್ಕೆ ಇದೆಂಥಾ ಸ್ಥಿತಿ

369

 

ನ್ಯೂಸ್‌ ನಾಟೌಟ್ : ಶಿವಲಿಂಗದ ಮುಂದೆಯೇ ಮದ್ಯ ಸೇವಿಸಿ ವಿಕೃತಿ ಮೆರೆದಿರುವ ಘಟನೆ ಚಾಮರಾಜನಗರದ ಉಪ್ಪಾರ ಬೀದಿಯಲ್ಲಿರುವ ದೇವಾಲಯವೊಂದರಲ್ಲಿ ನಡೆದಿದೆ.

ಪಾಳು ಬಿದ್ದ ಶಿವನ ದೇವಾಲಯವನ್ನು ಇದೀಗ ಬಾರ್ ಮಾಡಿಕೊಂಡು ಈ ಕೃತ್ಯ ಎಸಗ್ತಾ ಇರೋದು ವಿಪರ್ಯಾಸ. ಈ ಪುರಾತನ ಶಿವ ದೇವಾಲಯನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದರು ಎಂದು ಹೇಳಲಾಗಿದೆ.ಇದೀಗ ದೇವಾಲಯ ಹಾಳು ಬಿದ್ದಿದ್ದು, ಅದನ್ನು ಪುಂಡ ಪೋಕರಿಗಳು ತಮ್ಮ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಪುಂಡ ಪೋಕರಿಗಳು ಶಿವಲಿಂಗದ ಮುಂದೆ ಮದ್ಯವನ್ನು ಕುಡಿದು , ಗಲೀಜು ಮಾಡಿದ್ದು ಶಿವಲಿಂಗದ ಮೇಲೆ ಮದ್ಯವಿಟ್ಟು ಸೇವಿಸುತ್ತಿದ್ದಾರೆ.ಮಟ ಮಟ ಮದ್ಯಾಹ್ನವೇ ಕಂಠಪೂರ್ತಿ ಕುಡಿದು ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಕ್ಯಾಮರಾ ಕಂಡ ತಕ್ಷಣ ಮದ್ಯವನ್ನು ಬಿಟ್ಟು ಪರಾರಿಯಾಗಿದ್ದಾರೆ.

See also  ನೇತ್ರಾವತಿ ಒಡಲಲ್ಲಿ ಎತ್ತಿನಹೊಳೆ ಪ್ರೀಮಿಯರ್‌ ಲೀಗ್‌ !
  Ad Widget   Ad Widget   Ad Widget   Ad Widget   Ad Widget   Ad Widget   Ad Widget