ಮುಂಬೈ: ವಿವಾಹವಾಗಿ 8 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ ಪಡೆದಿದ್ದಾರೆ. ಮೆಲ್ಬರ್ನ್ ಮೂಲದ ಬಾಕ್ಸರ್ ಆಯಿಷಾ ಮುಖರ್ಜಿ ಮತ್ತು ಶಿಖರ್ ಧವನ್ 2012ರಲ್ಲಿ ವಿವಾಹವಾಗಿದ್ದರು. ಆಯಿಷಾಗೆ ಹಿಂದಿನ ಮದುವೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಾಗಿದ್ದು ಶಿಖರ್ ಅವರನ್ನು ವಿವಾಹವಾದ ಬಳಿಕ ಇಬ್ಬರು ಹೆಣ್ಣು ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದರು. ನಂತರ ಈ ಜೋಡಿಗೆ ಝೊರವರ್ ಎಂಬ ಗಂಡು ಮಗ ಜನಿಸಿದ್ದ. ಆಯಿಷಾ ಮುಖರ್ಜಿ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಸುದ್ದಿಯನ್ನು ಆಯಿಷಾ ಅವರೇ ದೃಢಪಡಿಸಿದ್ದು ಆಕೆಯ ಮೂಲ ಪ್ರೊಫೈಲ್ ಹೆಸರಿನ ಆಯಿಷಾ ಧವನ್ ಸೋಷಿಯಲ್ ಮೀಡಿಯಾ ಸೈಟ್ ನಿಂದ ಡಿಲೀಟ್ ಆಗಿದೆ.