ನವದೆಹಲಿ: ಅಪ್ಪನಿಗೆ ಮಸ್ಕ ಹೊಡೆದು ಮಗಳು ಒಂದು ಸ್ಕೂಟಿಯನ್ನು ತನ್ನ ಹುಟ್ಟುಹಬ್ಬದಂದು ಉಡುಗೊರೆಯಾಗಿ ಪಡೆದುಕೊಂಡಳು. ಇನ್ನೇನು ಸ್ಕೂಟಿ ಏರಿ ಆಕೆ ಕಾಲೇಜಿಗೆ ಹೋಗುವ ಖುಷಿಯಲ್ಲಿ ತೇಲುತ್ತಿದ್ದಳು. ಇಂತಹ ಸಂದರ್ಭದಲ್ಲಿ ಗಾಡಿಗೆ ಹೊಸದಾಗಿ ರಿಜಿಸ್ಟರ್ ಮಾಡಿಕೊಂಡ ನಂಬರ್ ನಿಂದಾಗಿಯೇ ಯುವತಿ ಸ್ಕೂಟಿಯನ್ನೇ ಮೂಲೆಗೆ ಹಾಕಿದಳು. ಹೌದು. ಇದಕ್ಕೆಲ್ಲ ಕಾರಣ ಹೊಸ ಗಾಡಿಯ SEX ಅಕ್ಷರ ಮಾಲೆಯುಳ್ಳ ರಿಜಿಸ್ಟರ್ ನಂಬರ್ ನಿಂದ ಆಕೆ ಮುಜುಗರಕ್ಕೀಡಾದಳು. ಸ್ನೇಹಿತರ ಅಪಹಾಸ್ಯಕ್ಕೆ ಗುರಿಯಾದಳು. ಇದರಿಂದ ನೊಂದ ಆಕೆ ಸ್ಕೂಟಿಯನ್ನೇ ಓಡಿಸದಿರಲು ನಿರ್ಧರಿಸಿದಳು. ಈಗ ಸ್ಕೂಟಿ ಮೂಲೆಗೆ ಬಿದ್ದಿದೆ.