Uncategorized

ನಾಳೆಯಿಂದ ಶಾಲೆಗಳು ಆರಂಭ, ಬರೋಬ್ಬರಿ 18 ತಿಂಗಳ ಬಳಿಕ ತೆರೆಯುತ್ತಿರುವ ಶಾಲೆಯ ಬಾಗಿಲು

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಚ್ಚಲ್ಪಟ್ಟಿದ್ದ ಶಾಲೆಗಳು ಮತ್ತೆ ಆರಂಭಗೊಳ್ಳಲಿದೆ. ಈ ಮಧ್ಯೆ ಪೋಷಕರ ಒಪ್ಪಿಗೆ ಪತ್ರ ಕೂಡ ಕಡ್ಡಾಯವಾಗಲಿದೆ. ರಾಜ್ಯಾದ್ಯಂತ 9 ಹಾಗೂ 10ನೇ ತರಗತಿ ಪ್ರಾರಂಭಕ್ಕೆ 16,850 ಪ್ರೌಢಶಾಲೆಗಳು ಸಜ್ಜಾಗಿವೆ. ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಪ್ರಾರಂಭಿಸಲು 5,492 ಪಿ.ಯು ಕಾಲೇಜುಗಳು ಸಿದ್ಧತೆ ಮಾಡಿಕೊಂಡಿವೆ. ಆಗಸ್ಟ್​ 23ರಿಂದ 9,10,11 ಮತ್ತು 12ನೇ ತರಗತಿಗಳು ಶುರುವಾಗಲಿದ್ದು, ಶಿಕ್ಷಣ ಇಲಾಖೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಕೇಳಿ ಕೇಳಿ ಬೇಸರಗೊಂಡಿದ್ದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಉತ್ಸುಕರಾಗಿದ್ದಾರೆ. ಈಗ ಶಾಲೆಯ ವಾತಾವರಣದಲ್ಲಿ ನೇರವಾಗಿ ಪಾಠ ಕೇಳುವ ಅವಕಾಶ ಸಿಕ್ಕಿದೆ.

Related posts

ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರ 124ನೇ ಜನ್ಮ ದಿನಾಚರಣೆ

ಯೋಧ ಹಾಗೂ ಆತನ ಕುಟುಂಬದ ಮೇಲಿನ ಹಲ್ಲೆ ಪ್ರಕರಣ, ಶುಂಠಿಕೊಪ್ಪದ ಮೂವರು ಆರೋಪಿಗಳ ಬಂಧನ

ಮಕರ ಸಂಕ್ರಾತಿಯ ಪರಮಾನಂದ: ಗವಿಗಂಗಾಧರೇಶ್ವರನಿಗೆ ಸೂರ್ಯದೇವರ ಅಪ್ಪುಗೆ..!