Latest

20 ವರ್ಷಗಳ ಬಳಿಕ ಮತ್ತೆ ಯೋಗರಾಜ್ ಭಟ್ ಸಿನಿಮಾದಲ್ಲಿ ಮೋಹಕ ತಾರೆ!!ದುಂಡು ಮುಖದ ಚೆಲ್ವೆಯನ್ನು ತೆರೆ ಮೇಲೆ ಕಾಣಲು ಸಜ್ಜಾದ ಅಭಿಮಾನಿಗಳು!

175
Spread the love

ನ್ಯೂಸ್‌ ನಾಟೌಟ್: ಮೋಹಕ ತಾರೆ ರಮ್ಯಾ (Ramya) ಅವರು ಸಿನಿಮಾ ಇಂಡಸ್ಟ್ರೀಯಿಂದ ದೂರವಾಗಿದ್ದೇ ಎಲ್ಲರಿಗೂ ಬೇಸರ ತರಿಸುವಂತಹ ವಿಷಯವಾಗಿತ್ತು. ಅವರ ಅಭಿಮಾನಿಗಳಂತು ಯಾವಾಗ ರಮ್ಯಾ ಅವರು ತೆರೆ ಮೇಲೆ ಬರ್ತಾರೆ ಅನ್ನೋದನ್ನೇ ಕಾಯುತ್ತಾ ಇದ್ದರು.ಇದೀಗ

ಕೊನೆಗೂ ಸಿನಿಮಾಗೆ ಕಮ್ ಬ್ಯಾಕ್ ಆಗೋ ಕಾಲ ಬಂತು. ‘ರಂಗ ಎಸ್‌ಎಸ್‌ಎಲ್‌ಸಿ’ ಆದ್ಮೇಲೆ 20 ವರ್ಷಗಳ ಬಳಿಕ ಮತ್ತೆ ಯೋಗರಾಜ್ ಭಟ್ (Yogaraj Bhat) ಜೊತೆ ಸಿನಿಮಾ ಮಾಡೋಕೆ ರಮ್ಯಾ ಸಾಥ್ ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ವಿಕಟಕವಿ ನಿರ್ದೇಶಕ ಯೋಗರಾಜ್ ಭಟ್ ಅವರು ಬರೆದ ಸ್ಕ್ರಿಪ್ಟ್ ಇಷ್ಟವಾಗಿ ನಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ಮನದ ಕಡಲು’ ಸಿನಿಮಾಗೆ ಬಂಡವಾಳ ಹೂಡಿರುವ ಇ. ಕೃಷ್ಣಪ್ಪ ಮತ್ತು ಜಿ. ಗಂಗಾಧರ್ ಅವರು ರಮ್ಯಾ ಕಮ್ ಬ್ಯಾಕ್ ಚಿತ್ರಕ್ಕೆ ನಿರ್ಮಾಣ ಮಾಡ್ತಿದ್ದಾರೆ. ಈ ಚಿತ್ರಕ್ಕೆ ರಮ್ಯಾ ನಿರ್ಮಾಣದ ಸಂಸ್ಥೆ ‘ಆಪಲ್ ಬ್ಯಾಕ್ಸ್’ ಕೂಡ ಕೈ ಜೋಡಿಸಲಿದೆ.

ಸದ್ಯ ರಮ್ಯಾ ಕಮ್ ಬ್ಯಾಕ್ ಆಗಿದ್ದನ್ನು ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ರಮ್ಯಾ ಜೊತೆ ಯಾರೆಲ್ಲಾ ನಟಿಸ್ತಾರೆ? ಯಾವಾಗಿನಿಂದ ಶೂಟಿಂಗ್ ಶುರು ಆಗಲಿದೆ? ಹೇಗಿರಲಿದೆ ಅನ್ನೋ ಕುತೂಹಲ ಸಿನಿ ಅಭಿಮಾನಿಗಳಲ್ಲಿದೆ. ಫಿಲ್ಮ್ ಫಿಸ್ಟಿವಲ್ ಸಂವಾದದಲ್ಲಿ ಭಾಗಿಯಾಗಿದ್ದ ರಮ್ಯಾ ಅವರು ಸಿನಿಮಾ ಕಮ್ ಬ್ಯಾಕ್ ರಿಯಾಕ್ಟ್ ಮಾಡಿದ್ದರು. ಈಗಾಗಲೇ 4 ಸ್ಕ್ರಿಪ್ಟ್ ಕೇಳಿದ್ದೇನೆ. ಬಹುಶಃ ಅದರಲ್ಲಿ ಒಂದು ಸಿನಿಮಾದಲ್ಲಿ ನಾನು ನಟಿಸುತ್ತೇನೆ ಎಂದು ಮಾತನಾಡಿದ್ದರು. ಅದರಂತೆ ಈಗ ಗುಡ್‌ ನ್ಯೂಸ್‌ ಸಿಕ್ಕಿದೆ.ಅಂದಹಾಗೆ, 2004ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರದಲ್ಲಿ ಸುದೀಪ್‌ಗೆ (Sudeep) ನಾಯಕಿಯಾಗಿ ರಮ್ಯಾ ನಟಿಸಿದ್ದರು.

See also  ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದ ನಟ ವಿಜಯ್ ವಿರುದ್ಧ ದೂರು ದಾಖಲು..! ಧಾರ್ಮಿಕ ಆಚರಣೆಗೆ ಸಂಬಂಧವಿಲ್ಲದ ಕುಡುಕರು, ರೌಡಿಗಳು ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದಾರೆಂದು ದೂರು..!
  Ad Widget   Ad Widget   Ad Widget   Ad Widget   Ad Widget   Ad Widget