ಸುಳ್ಯ

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಎಸ್‌ಡಿಪಿಐ ಸಂಪಾಜೆ ವಲಯ ವತಿಯಿಂದ ಪ್ರತಿಭಟನೆ

1.1k

ಕಲ್ಲುಗುಂಡಿ:  ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಡುಗೆ ಅನಿಲ ದರ ಸತತವಾಗಿ ಏರಿಕೆ ಮಾಡುವುದನ್ನು ಖಂಡಿಸಿ ಎಸ್‌ಡಿಪಿಐ ಸಂಪಾಜೆ ವಲಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಡಿಪಿಐ  ಸಂಪಾಜೆ ವಲಯ ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕೋವಿಡ್ ಸಂಕಷ್ಟದ ಸಮಯದಲ್ಲಿ  ಅಡುಗೆ ಅನಿಲ ದರ ಏರಿಕೆ ಮಾಡಿದ್ದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಡ್ವೋಕೇಟ್ ರಶೀದ್ ಗೂನಡ್ಕ, ಕಡೆಪಾಲ ಬ್ರಾಂಚ್ ಅಧ್ಯಕ್ಷ ಸಾಜೀದ್ ಐ ಜಿ, ಗೂನಡ್ಕ ಬ್ರಾಂಚ್ ಕಾರ್ಯದರ್ಶಿ ಶೆರೀಫ್ ಸೆಟ್ಯಡ್ಕ, ಸಂಪಾಜೆ ವಲಯ ಕೋಶಾಧಿಕಾರಿ ಸಲೀಂ ದರ್ಕಾಸ್ ಗೂನಡ್ಕ, ಎಸ್‌ಡಿಪಿಐ  ಮುಖಂಡ ರಹೀಮ್ ಕಾಸ್ಪಡಿ, ರಶೀದ್ ದೊಡ್ಡಡ್ಕ ಉಪಸ್ಥಿತರಿದ್ದರು. 

See also  ಸುಳ್ಯ: ಎನ್ನೆoಪಿಯುಸಿಯಲ್ಲಿ ಸಂವಿಧಾನ ದಿನಾಚರಣೆ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget