ಕಲ್ಲುಗುಂಡಿ: ಕಡೆಪಾಲ ನಿವಾಸಿ ಚಂದ್ರಹಾಸ ಅನ್ನುವ ವ್ಯಕ್ತಿ ಸಂಪಾಜೆಯ ಕಲ್ಲುಗುಂಡಿಯಲ್ಲಿ ಹಠಾತ್ ಕುಸಿದು ಬಿದ್ದು ನಿಧನರಾದ ಘಟನೆ ಬುಧವಾರ ನಡೆದಿದೆ. ಕಲ್ಲುಗುಂಡಿ ಪೇಟೆಯಲ್ಲಿ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 35 ವರ್ಷದ ಚಂದ್ರಹಾಸ ಕೂಲಿಶೆಡ್ ಎಂಬಲ್ಲಿ ಕುಸಿದು ಬಿದ್ದು ನಿಧನರಾಗಿದ್ದಾರೆ. ಚಂದ್ರಹಾಸ ಅವರ ಅಂತಿಮ ವಿಧಿ ವಿಧಾನವನ್ನು ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಅವರ ಸಹೋದರ ರವಿ, ಬಾಬು ದೊಡ್ಡಡ್ಕ, ಗುರುವಪ್ಪ ಕಡೆಪಾಲ, ರಾಜೇಶ್ ವೆಲ್ಡಿಂಗ್ ಶಾಪ್ ಕೂಲಿಶೆಡ್, ಗ್ರಾಮ ಪಂಚಾಯತ್ ಸದಸ್ಯ ಎಸ್. ಕೆ. ಹನೀಫ್ ಮತ್ತಿತರರು ಪಾಲ್ಗೊಂಡಿದ್ದರು. ಈ ವೇಳೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಮ್. ಶಾಹಿದ್, ಬಾಲಚಂದ್ರ ದಂಡೇಕಜೆ, ರಹೀಮ್ ಬೀಜದಕಟ್ಟೆ ಉಪಸ್ಥಿತರಿದ್ದರು.