ಕರಾವಳಿ

ಸಂಪಾಜೆ: ಗ್ರಾಮ ಪಂಚಾಯತ್ ನಿಂದ ಕಸ ಸಾಗಾಟ ವಾಹನಕ್ಕೆ ಚಾಲನೆ

670

ಕಲ್ಲುಗುಂಡಿ: ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನೂತನ ಕಸ ಸಾಗಾಟ ವಾಹನಕ್ಕೆ ಗ್ರಾಮ ಪಂಚಾಯತ್ ಆವರಣದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಚಾಲನೆ ನೀಡಿದರು.

ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಮಂಜುನಾಥ್ ರವರು ವಾಹನ ಚಾಲನೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟಿಎಂ ಶಾಹಿದ್ ತೆಕ್ಕಿಲ್ ಸಂಪಾಜೆ ಪಂಚಾಯತ್ 2 ಬಾರಿ ಗಾಂಧಿ ಗ್ರಾಮ ಪಡೆಯುವ ಮೂಲಕ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿ ಸಹಕಾರ ನೀಡಿದ ಪ್ರತಿಯೊಬ್ಬರಿಗೆ ಕ್ರತಜ್ಞತೆ ಸಲ್ಲಿಸಿದರು. ಉದ್ಘಾಟನೆ ಮಾಡಿ ಮಾತನಾಡಿದ ಸೋಮಶೇಖರ್ ಕೊಇಂಗಾಜೆ ಜನ ಪರ ಕೆಲಸ ಮಾಡುವ ಮೂಲಕ ಪಂಚಾಯತ್ ಒಳ್ಳೆಯ ಕೆಲಸ ಮಾಡುತ್ತಿದ್ದು ನಾನು ಸೊಸೈಟಿ ಅಧ್ಯಕ್ಷನಾಗಿ, ಪಂಚಾಯತ್ ಸದಸ್ಯನಾಗಿ ಜಿ. ಕೆ. ಹಮೀದ್ ನೇತೃತ್ವದ ಪಂಚಾಯತ್ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದರು.

ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ, ಎಸ್. ಕೆ. ಹನೀಫ್, ಸವಾದ್ ಗೂನಡ್ಕ, ಅನುಪಮಾ, ರಜನಿ, ವಿಮಲಾ ಪ್ರಸಾದ್, ವಿಜಯ ಕುಮಾರ್, ಸುಶೀಲಾ, ಕಲ್ಲುಗುಂಡಿ ಜಮಾಯತ್ ಕಾರ್ಯದರ್ಶಿ ರಝಕ್ ಸೂಪರ್, ರಿಯಾಜ್ ಎಸ್. ಎ., ಸುಜಿತ್ ನವಮಿ, ಅಬೂಬಕ್ಕರ್ ಡ್ರೈವರ್, ಸೊಸೈಟಿ ನಿರ್ದೇಶಕ ಹಮೀದ್. ಎಚ್, ಇಂಜಿನಿಯರ್ ಗಳಾದ ರಶ್ಮಿ ಆಕಾಂಶ ರೈ, ಗೋಪಮ್ಮ, ಭರತ್, ಗುರುವ, ಮಧುರ, ಸವಿತಾ, ಹರ್ಷಿತ್, ಕಲ್ಲುಗುಂಡಿ ಸೋಮನಾಥ್, ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರವತಿ ಉಪಸ್ಥಿತರಿದ್ದರು.

See also  ಮದ್ಯ ಪ್ರಿಯರಿಗೆ ಮತ್ತೆ ಶಾಕ್ ನೀಡಿದ ರಾಜ್ಯ ಸರ್ಕಾರ..! ಕಳೆದ 15 ತಿಂಗಳಲ್ಲಿ 5ನೇ ಬಾರಿಗೆ ಬೆಲೆ ಏರಿಕೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget