ನ್ಯೂಸ್ ನಾಟೌಟ್: ಕೊಡಗು ಸಂಪಾಜೆಯ ಬಡ ಕುಟುಂಬದ ಹಿನ್ನೆಲೆಯುಳ್ಳ ವೆಂಕಟೇಶ್ ಹೊದ್ದೆಟ್ಟಿ ಅವರು ಮೆದುಳು ರಕ್ತಸ್ರಾವದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
View this post on Instagram
ಸದ್ಯ ಫಸ್ಟ್ ನ್ಯುರೋ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಗುಣಮುಖರಾಗಲು ಸುಮಾರು 3 ಲಕ್ಷ ರೂ. ಅಗತ್ಯವಿದ್ದು ಬಡ ಕುಟುಂಬ ಹಣ ಹೊಂದಿಸಲು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಮನೆಗೆ ಆಧಾರಸ್ಥಂಭವಾಗಿದ್ದ ವೆಂಕಟೇಶ್ ಅನಾರೋಗ್ಯದಿಂದ ಕುಟುಂಬ ಶಾಕ್ ಗೆ ಒಳಗಾಗಿದೆ.
ಮನೆಯವರು ಈಗ ವೆಂಕಟೇಶ್ ಅವರನ್ನು ಬದುಕಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಹಾಯ ಮಾಡಲಿಚ್ಛಿಸುವವರು ಹೊದ್ದೆಟ್ಟಿ ವೆಂಕಟೇಶ್ ರವರ ಮಗ ಹರ್ಷಿತ್ H V ಅವರ ಮೊಬೈಲ್ ಸಂಖ್ಯೆ 8197132948 ಸಂಪರ್ಕಿಸಬಹುದು ಅಥವಾ ಅವರ ಫೋನ್ ಪೇಗೆ ಹಣ ಕಳುಹಿಸಬಹುದಾಗಿದೆ.