ಸುಳ್ಯ

ಸಂಪಾಜೆ ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ಲಾರಿಗಳು ನಿಂತಿದ್ಯಾಕೆ? ದ.ಕ ಜಿಲ್ಲಾಡಳಿತ ಮಾಡಿದ ಎಡವಟ್ಟೇನು ಗೊತ್ತಾ?

1.2k

ಸುಳ್ಯ: ಸಂಪಾಜೆ ಮಡಿಕೇರಿ ರಸ್ತೆ ಕುಸಿತಗೊಂಡಿದ್ದು ಈ ರಸ್ತೆಯಲ್ಲಿ ಘನ ವಾಹನ ಸಂಚಾರವನ್ನು ಕೊಡಗು ಜಿಲ್ಲಾಡಳಿತ ನಿಷೇಧಿಸಿದ ಹಿನ್ನೆಲೆಯಲ್ಲಿ ಸಂಪಾಜೆ ಚೆಕ್ ಪೋಸ್ಟ್ ಬಳಿ ಘನವಾಹನಗಳು ಒಂದು ಕಿ.ಮೀ ದೂರ ಸಾಲುಗಟ್ಟಿ ನಿಂತಿವೆ. ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘನ ವಾಹನ ಸಂಚರಿಸದಂತೆ ಯಾವುದೇ ಮಾಹಿತಿ ನೀಡದಿರುವುದರಿಂದ ನಮಗೆ ಸಮಸ್ಯೆಯಾಗಿದೆ ಎಂದು ಘನ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘನ ವಾಹನಗಳನ್ನು ತಡೆದಿರುವುದರಿಂದ ನಮಗೆ ಮೂಲಭೂತ ವ್ಯವಸ್ಥೆಗಳಿಲ್ಲದೆ ನಾವು ಸಮಸ್ಯೆಗೊಳಗಾಗಿದ್ದೇವೆ ಎಂದು ಚಾಲಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗು ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಎರಡು ದಿವಸದ ಹಿಂದೆ ಘನವಾಹನ ಚಾಲಕರಿಂದ ಹಣ ಪಡೆದುಕೊಂದು ಘನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಸ್ಥಳೀಯರು ದೂರು ನೀಡಿರುವ ಹಿನ್ನಲೆಯಲ್ಲಿ ಆರ್.ಟಿ.ಒ ಆಧಿಕಾರಿಗಳು ಚೆಕ್ ಪೋಸ್ಟ್ ಗೆ ಬಂದು ಮಾಹಿತಿ ಪಡೆದುಕೊಂಡಿದ್ದರು.ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಯಾವುದೇ ಘನವಾಹನಗಳು ಸಂಪಾಜೆ ಮಡಿಕೇರಿ ರಸ್ತೆಯಲ್ಲಿ ಸಂಚರಿಸಲು ಅವಕಾಶವಾಗಿಲ್ಲ.ಇದರಿಂದ ಇಂದು ಘನವಾಹನಗಳು ಚೆಕ್ ಪೋಸ್ಟ್ ಬಳಿ ಸಾಲುಗಟ್ಟಿ ನಿಂತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

See also  ಸಂಪಾಜೆ: ಲೈನ್ ಮ್ಯಾನ್ ಗೆ ಕರೆಂಟ್ ಶಾಕ್..! ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲು
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget