ಸುಳ್ಯ

ಸಂಪಾಜೆ: ಗ್ರಾಮ ಪಂಚಾಯತ್ ನಿಂದ ಸ್ವಚ್ಛತಾ ಅಭಿಯಾನ

692

ಸಂಪಾಜೆ: ಜಿ.ಕೆ.ಹಮೀದ್ ಅಧ್ಯಕ್ಷತೆ ಹೊಂದಿರುವ ಗ್ರಾಮ ಪಂಚಾಯತ್ ಸಂಪಾಜೆ ನೇತೃತ್ವದಲ್ಲಿ ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಗುರುವಾರ ನಡೆಯಿತು.

ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯಿಂದ ಆರಂಭಗೊಂಡು ಮೇಲಿನ ಪೇಟೆ ಅಂಚೆ ಕಚೇರಿ ತನಕ ಸ್ವಚ್ಛತೆ ಮಾಡಲಾಯಿತು.

ಗ್ರಾಮ ಪಂಚಾಯತ್ ಸದಸ್ಯರುಗಳಾದ ಎಸ್. ಕೆ. ಹನೀಫ್, ಜಗದೀಶ್ ರೈ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್, ಸಂಪಾಜೆ ಬದ್ರ್ ಜುಮಾ ಮಸೀದಿ ಅಧ್ಯಕ್ಷ ತಾಜ್ ಮಹಮದ್, ಎಸ್‌ಕೆಎಸ್ಎಸ್ಎಫ್ ಕಲ್ಲುಗುಂಡಿ ಶಾಖೆ ಅಧ್ಯಕ್ಷ ರಿಯಾಜ್ ಕಲ್ಲುಗುಂಡಿ, ಎಸ್‌ಕೆಎಸ್ಎಸ್ಎಫ್ ಪದಾಧಿಕಾರಿಗಳಾದ ರಫೀಕ್. ಕೆ. ಎಮ್, ರಝಕ್ ಸೂಪರ್, ನಿಜಾಮ್. ಎಸ್. ಎ. ಸೊಸೈಟಿ ನಿರ್ದೇಶಕ ಆನಂದ ಗೌಡ, ದುರ್ಗಾಪ್ರಸಾದ್, ಅಂಗನವಾಡಿ ಕಾರ್ಯಕರ್ತಯರಾದ ಧರ್ಮಕಲಾ, ಶೀಲಾವತಿ, ಹರ್ಷಿತಾ ಕುಮಾರಿ, ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಪಂಚಾಯತ್ ಸಿಬ್ಬಂದಿ ಭರತ್, ಪ್ರೀತಮ್, ಭೋಜಪ್ಪ, ಗುರುವಪ್ಪ, ಮೊದಲದವರು ಉಪಸ್ಥಿತರಿದ್ದರು.

See also  ಕೋವಿಡ್ ಪಾಸಿಟಿವಿಟಿ ದರ ಏರಿಕೆಯಾಗದಂತೆ ಎಚ್ಚರಿಕೆ ವಹಿಸಿ: ಸಚಿವ ಅಂಗಾರ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget