Latestಕೊಡಗು

ಸಂಪಾಜೆ: ‘ರೈತರಿಗೆ ಕಾಲಾವಕಾಶ ಕೊಡಿ’, ಪಯಸ್ವಿನಿ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷರಿಂದ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣಗೆ ಮನವಿ

715

ನ್ಯೂಸ್ ನಾಟೌಟ್: ರೈತರ ಭೂ ಅಡಮಾನ ಮಾಡಲು ಕಾಲಾವಕಾಶ ನೀಡಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕರಾಗಿರುವ ಎ.ಎಸ್.ಪೊನ್ನಣ್ಣ ಅವರಿಗೆ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಂತ್ ಊರುಬೈಲು ಮನವಿ ಮಾಡಿದ್ದಾರೆ.

ತಮ್ಮ ಸಂಸ್ಥೆಯ ನಿರ್ದೇಶಕರು ಮತ್ತು ಊರಿನ ಪ್ರಮುಖರೊಂದಿಗೆ ತೆರಳಿ ಅವರು ಶಾಸಕರನ್ನು ಇತ್ತೀಚೆಗೆ ಭೇಟಿಯಾದರು. ರಾಜ್ಯ ಸರಕಾರದ ಆದೇಶದಂತೆ ಪ್ರಾ.ಕೃ.ಪ. ಸ. ಸಂಘಗಳಿಂದ ಕೆಸಿಸಿ ಸಾಲ ಹೊಂದಿರುವ ರೈತರು ತಮ್ಮ ಸಾಲಗಳಿಗೆ ಆಧಾರವಾಗಿ ತಮ್ಮ ಭೂಹಿಡುವಳಿಗಳನ್ನು ಅಡಮಾನ ಮತ್ತು ನಮೂನೆ 3 ದಾಖಲು ಮಾಡುವುದನ್ನು ಕಡ್ಡಾಯ ಮಾಡಿದ್ದನ್ನು ಶಾಸಕರು ತಡೆಹಿಡಿದು ರೈತರಿಗೆ ಕಾಲಾವಕಾಶ ಕೋಡಬೇಕಾಗಿ ಅನಂತ್ ಊರುಬೈಲು ಅವರು ಶಾಸಕರನ್ನು ಒತ್ತಾಯಿಸಿದರು.
ಸಂಸ್ಥೆಯ ನಿರ್ದೇಶಕ ದಿನೇಶ್ ಸಣ್ಣಮನೆ, ರಾಮಮೂರ್ತಿ ಉಂಬಳೆ, ಪ್ರಮುಖರಾದ ಸೂರಜ್ ಹೊಸೂರು, ರವಿರಾಜ್ ಹೊಸೂರು, ಆದಂ ಸೆಂಟ್ಯಾರ್, ಸುರೇಶ್. ಪಿ.ಎಲ್ ,ಹನೀಫ್ ಮುಂತಾದವರು ಉಪಸ್ಥಿತರಿದ್ದರು.

ಕೆಲಸದ ಅವಧಿ 9ರಿಂದ 10ಗಂಟೆಗೆ ಹೆಚ್ಚಳ ಮಾಡಿದ್ದಕ್ಕೆ ಐಟಿ ಉದ್ಯೋಗಿಗಳಿಂದ ವಿರೋಧ..! ಸರ್ಕಾರದಿಂದ ಕಾಯ್ದೆಯ ತಿದ್ದುಪಡಿ..!

ವರ್ಷಕ್ಕೆ 30 ದಿನ ಮಾತ್ರ ತೆರೆಯುವ ಕೊಟ್ಟಿಯೂರು ಶಿವ ದೇಗುಲಕ್ಕೆ ನಟ ದರ್ಶನ್ ಭೇಟಿ..! ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್..!

See also  ಮಂಗಳೂರು: ತಿರುಮಲ-ತಿರುಪತಿ ದೇವಸ್ಥಾನದಿಂದ ಬರೋಬ್ಬರಿ 10 ಲಕ್ಷ ಕೆಜಿ ನಂದಿನಿ ತುಪ್ಪಕ್ಕೆ ಬೇಡಿಕೆ..! ಬೇರೆ ಯಾವುದೇ ಕಂಪನಿಯ ತುಪ್ಪ ಬೇಡ ಎಂದ ಟಿಟಿಡಿ..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget