ಕರಾವಳಿ

ಸಂಪಾಜೆ: ಮೇಯಲು ಬಿಟ್ಟ ಹಸುಗಳೇ ಮಾಯಾ, ಮಾಲೀಕರು ಕಂಗಾಲು..!

18

ಕಲ್ಲುಗುಂಡಿ: ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಮೇಯಲು ಬಿಟ್ಟ ಕೆಲವು ಹಸುಗಳು ಕಾಣೆಯಾಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದ್ದಕ್ಕಿದ್ದಂತೆ ಹೀಗೆ ಮೇಯಲು ಬಿಟ್ಟ ಹಸುಗಳು ನಾಪತ್ತೆಯಾಗುತ್ತಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲವು ಮಾಲೀಕರು ತಮ್ಮ ಹಸುಗಳನ್ನು ಕಳೆದುಕೊಂಡು ಈಗ ಕಂಗಾಲಾಗಿದ್ದಾರೆ ಎನ್ನಲಾಗಿದೆ, ಅಕ್ರಮವಾಗಿ ಗೋವುಗಳನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.