ಅರಂತೋಡು: ಅಡಿಕೆ ಎಲೆ ರೋಗ ನಿರೋಧಕ ತಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ರೋಗ ಬಾಧಿತ ತೋಟದಲ್ಲಿರುವ ಹಸಿರು ಎಲೆ ಕಾಣುವ ಅಡಿಕೆ ಮರಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಅಡಿಕೆ ಹಳದಿ ಎಲೆ ರೋಗ ಜಾಸ್ತಿ ಕಾಣಿಸಿಕೊಂಡಿರುವ ಸಂಪಾಜೆ, ಚೆಂಬು ಗ್ರಾಮಗಳಲ್ಲಿ ಈಗ ರೋಗ ತಗುಲದೆ ಇರುವ ತೋಟದಲ್ಲಿ ಉಳಿದುಕೊಂಡಿರುವ ಮರಗಳನ್ನು ಗುರುತಿಸಲಾಗಿದೆ. ಸಿಪಿಸಿಆರ್ ವಿಟ್ಲದ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಭವಿಷ್ಯ ಅವರ ನೇತೃತ್ವದಲ್ಲಿ ಹಸಿರಾಗಿರುವ ಅಡಕೆ ಮರಗಳನ್ನು ಗುರುತಿಸಲಾಯಿತು. ಶ್ರೀನಿವಾಸ ನಿಡಿಂಜಿ, ರವಿ ಬಾಲೆಂಬೆ, ಗಿರೀಶ್ ಚೆಂಡೆಡ್ಕ,ಭವ್ಯಾನಂದ ಕುಂಯಿಂತೋಡು ಅವರ ಹಳದಿ ರೋಗ ಬಾಧಿತ ತೋಟಗಳಿಗೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ,ತೋಟದ ಮಾಲಕರು ಉಪಸ್ಥಿತರಿದ್ದರು. ಸಂಪಾಜೆ ಪ್ರಾಥಮಿಕ ಕ್ರಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ ಕೊಯೈಂಗಾಜೆ ಸಹಕಾರ ನೀಡಿದರು.