ಸಂಪಾಜೆ: ಅಪರಿಚಿತ ವಾಹನವೊಂದು ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿರುವ ಘಟನೆ ಸಂಪಾಜೆಯಿಂದ ವರದಿಯಾಗಿದೆ. ಘಟನೆಯಲ್ಲಿ ಸಂಪಾಜೆಯ ಸರೋಜ್ ಕುಮಾರ್ (55) ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರತಿ ದಿನ ವಾಕಿಂಗ್ ಹೋಗುತ್ತಿದ್ದ ಅವರು ಎಂದಿನಂತೆ ಇಂದು ಬೆಳಗ್ಗೆಯೂ ಹೋಗಿದ್ದಾರೆ. ಈ ವೇಳೆ ಸಂಪಾಜೆಯಲ್ಲಿ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿಯಾಗಿ ಎಸ್ಕೇಪ್ ಆಗಿದೆ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಹಾಲು ಕೊಡಲು ಅಂಗಡಿಗೆ ಹೋಗುತ್ತಿದ್ದವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.