ನ್ಯೂಸ್ ನಾಟೌಟ್: ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ವಿದ್ಯಾರ್ಥಿಗಳು ಮೆಚ್ಚಿದ ಉಪನ್ಯಾಸಕ ಟಿಕೆಜಿ ಭಟ್ ಇವರು ಸೋಮವಾರ (ಮಾ.10) ಸಂಜೆ ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಮಲಗಿದ್ದಲ್ಲೇ ಆಗಿದ್ದ ಅವರನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುವ ಸವಾಲು ಅವರ ಮನೆಯವರಿಗಿತ್ತು. ಪುತ್ತೂರಿನ ಸಮೀಪ ವಾಸವಾಗಿದ್ದ ಅವರು ನಿವೃತ್ತಿ ಜೀವನದ ಬಳಿಕ ತಮ್ಮದೊಂದು ಪುಟ್ಟ ಸೂರನ್ನು ಮಾಡಿಕೊಂಡು ಅಲ್ಲಿಯೇ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದರು. ಸಾಹಿತ್ಯ ಕ್ಷೇತ್ರದ ಬಗ್ಗೆ ಅವರಿಗೆ ಅಪಾರ ಒಲವಿತ್ತು. ಮಡಿಕೇರಿ ಆಕಾಶವಾಣಿ ಸೇರಿದಂತೆ ಹಲವಾರು ಕಡೆಗಳಲ್ಲಿ ಇವರು ತಮ್ಮ ಹನಿಗವನದ ಮೂಲಕ ಜನರನ್ನು ರಂಜಿಸಿದ್ದರು. ರಾಜಕೀಯ ವಿಜ್ಞಾನದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಅವರು ಹಲವಾರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಮೂಲಕ ಜನಮೆಚ್ಚುಗೆಯನ್ನು ಗಳಿಸಿದ್ದರು.