ಯಕ್ಷಯಾನ

ಯಕ್ಷಗಾನ ಅರ್ಥದಾರಿ ಜಬ್ಬಾರ್‌ ಸಮೊಗೆ ವನಜ ರಂಗಮನೆ ಪ್ರಶಸ್ತಿ

ಸುಳ್ಯ: ಇಲ್ಲಿನ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ನೀಡುವ ವನಜ ರಂಗಮನೆ ಪ್ರಶಸ್ತಿಗೆ ಈ ವರ್ಷ ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬರ್ ಸಮೊ ಆಯ್ಕೆಯಾಗಿದ್ದಾರೆ.

ರಂಗನಿರ್ದೇಶಕ ಜೀವನ್‌ ರಾಂ ಸುಳ್ಯ ಇವರ ತಾಯಿ ವನಜಾಕ್ಷಿ ಜಯರಾಮ್‌ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತದೆ. ಜಬ್ಬಾರ್ ಸಮೊ ಅವರು ಕಳೆದ 35 ವರ್ಷಗಳಿಂದಯಕ್ಷಗಾನ ಅರ್ಥದಾರಿಯಾಗಿ ಜನಮನದಲ್ಲಿ ಗುರುತಿಸಿಕೊಂಡಿದ್ದಾರೆ. ಮೂಲತಃ ಸುಳ್ಯ ತಾಲೂಕಿನ ಸಂಪಾಜೆಯವರಾಗಿರುವ ಜಬ್ಬಾರ್ ಸಮೊ ಸದ್ಯ ಪುತ್ತೂರಿನಲ್ಲಿ ನೆಲೆಸಿದ್ದಾರೆ. ಇಪ್ಪತ್ತೆಂಟು ವರ್ಷ ರೇಷ್ಮೆ ಇಲಾಖೆಯಲ್ಲಿಕೆಲಸ ಮಾಡಿರುವ ಅವರು ಈಗ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ.

Related posts

ಯಕ್ಷಗಾನ ದಿಗ್ಗಜ ದಿವಂಗತ ಕುಂಬ್ಳೆ ಸುಂದರ ರಾವ್ ಗೆ ನುಡಿ ನಮನ

ಹಾವೇರಿ ಸಾಹಿತ್ಯ ಸಮ್ಮೇಳನ: ಕನ್ನಡದ ಅಸ್ಮಿತೆ ಉಳಿಸುತ್ತಿದೆ ಯಕ್ಷಗಾನ

ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಸುಂದರ್ ರಾವ್ ಇನ್ನಿಲ್ಲ