ಕ್ರೈಂ

ಗ್ರಾಮ ಪಂಚಾಯತ್ ಸದಸ್ಯೆಯನ್ನೇ ಕಾಡಿನೊಳಗೆ ಎಳೆದೊಯ್ದ ಸೈಕೋ ಪ್ರೇಮಿ..? ಇಬ್ಬರು ನಾಪತ್ತೆ

608
Spread the love

ಚೆಂಬು: ಪಂಚಾಯತ್ ಸದಸ್ಯೆ ಕಮಲಾ ಕೇಶವ್ ಎಂಬುವವರನ್ನು ವ್ಯಕ್ತಿಯೊರ್ವ ಹೊಳೆಗೆ ದೂಡಿ ಹಾಕಿ ಬಳಿಕ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದ ಘಟನೆ ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಡಬಡ್ಕ ಎಂಬಲ್ಲಿ ನಡೆದಿದೆ. ನಿನ್ನೆ ಸಂಜೆ ಏಳು ಗಂಟೆಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ಮಾಹಿತಿ ನೀಡಿದ್ದಾರೆ. ಮುತ್ತು ಎನ್ನುವವ ಸೈಕೋ ಮುಂಚಿನಿಂದಲೂ ಕಮಲಾ ಅವರನ್ನು ಪ್ರೀತಿಸುತ್ತಿದ್ದ , ಪಾಗಲ್‌ ಪ್ರೇಮಿ ಕಮಲಾ ಅವರಿಗೆ ಮದುವೆಯಾಗಿದ್ದರೂ ಅವರನ್ನು ಕಾಡಿಸುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಹಾಕಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಆತ ಆಕೆಯನ್ನು ಕಾಡಿನೊಳಗೆ ಕರೆದೊಯ್ದಿದ್ದಾನೆ. ಇಬ್ಬರ ಹುಡುಕಾಟ ನಡೆಯುತ್ತಿದೆ.

See also  ಪುತ್ತೂರಲ್ಲಿ ಸಾವಿನ ಮನೆಗೆ ತೆರಳಿ ಸಾಂತ್ವಾನ ಹೇಳಿದ ಪುತ್ತಿಲ ಬಗ್ಗೆ ಅಪಪ್ರಚಾರ..! ಬಕ್ರೀದ್ ಹಬ್ಬಕ್ಕೆ ಹೋದರೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವಿರೋಧಿಗಳು..!
  Ad Widget   Ad Widget   Ad Widget   Ad Widget   Ad Widget   Ad Widget