ಸಂಪಾಜೆ : ಸಂಪಾಜೆ ಗ್ರಾಮದ ಕಿಲಾರು ಮೂಲೆ ಅರಣ್ಯದಿಂದ ಅಕ್ರಮವಾಗಿ ಸಾಗುವಾನಿ ಮರ ಕಡಿದು ಸೀಳಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಸ್ಥಳೀಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿ ಮರ ವಶಪಡಿಸಿಕೊಂಡು ಬುಧವಾರ ನ್ಯಾಯಾಲಯಕ್ಕೆ ಹಾಜಾರು ಪಡಿಸಿದ್ದಾರೆ ಮತ್ತೋರ್ವ ಆರೋಪಿ ಓಡಿ ತಲೆಮರೆಸಿಕೊಂಡಿದ್ದಾನೆ. ಕಲ್ಲುಗುಂಡಿ ನಿವಾಸಿ ಇಬ್ರಾಹಿಂ ಎಂಬವರ ಮಗ ಮಹಮ್ಮದ್ ಆಲಿ ಮತ್ತು ಲಿಂಗಪ್ಪ ಪೂಜಾರಿ ಅವರ ಮಗ ನೀಲಪ್ಪ ಪೂಜಾರಿ ಕೀಲಾರು ಮೂಲೆ ಸಮೀಪ ಅರಣ್ಯದಲ್ಲಿ ಬೆಲೆ ಬಾಳುವ ಸಾಗುವಾನಿ ಮರ ಕಡಿದು ಸಾಗಾಟದ ಖಚಿತ ವರ್ತಮಾನದ ಮೇರೆಗೆ ಅರಣ್ಯ ಇಲಾಖೆಯವರು ದಾಳಿ ನಡೆಸಿ ಮರ ವಶಪಡಿಸಿಕೊಂಡು ಮಹಮ್ಮದ್ ಆಲಿಯನ್ನು ಬಂಧಿಸುವಷ್ಟರಲ್ಲಿ ನೀಲಪ್ಪ ಪೂಜಾರಿ ಪರಾರಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ.ಮಹಮ್ಮದ್ ಅಲಿಯನ್ನು ನ್ಯಾಯಾಲಯಕ್ಕೆಹಾಜರುಡಿಸಲಾಗಿದೆ.