ನ್ಯೂಸ್ ನಾಟೌಟ್: ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರು ಬಳಸಿಕೊಂಡು ವ್ಯಕ್ತಿಯೊಬ್ಬ ತನ್ನ ಸಹೋದರಿಗೆ 2.8 ಕೋಟಿ ರೂ. ವಂಚನೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಇದೊಂದು ಹೂಡಿಕೆ ಹಗರಣವಾಗಿದ್ದು, 60 ವರ್ಷದ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸಹೋದರ ಸೇರಿ 6 ಮಂದಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಅವರು ನಕಲಿ ಕಾಫಿ ಪುಡಿ ತಯಾರಿಕಾ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಹೇಳಿದ್ದರು, ಹೆಚ್ಚಿನ ಲಾಭವನ್ನು ನೀಡುವ ಭರವಸೆಯನ್ನು ನೀಡಿದ್ದರು, ಆದರೆ ಇದು ಹಗರಣವೆಂದು ತನಗೆ ತಿಳಿದಿರಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ.
5.7 ಕೋಟಿ ರೂ.ಗಳ ಹೂಡಿಕೆ ಯೋಜನೆಯು 60 ವರ್ಷದ ಉದ್ಯಮಿಯನ್ನು ಹೆಚ್ಚಿನ ಆದಾಯದ ಆಮಿಷಕ್ಕೆ ಒಳಪಡಿಸಿತು. ಈ ಹಗರಣದಲ್ಲಿ ಅವರು ಮಾತ್ರ ಹಣ ಕಳೆದುಕೊಂಡಿಲ್ಲ, ಇತರೆ ಹಲವರು ಆರ್ಥಿಕ ನಷ್ಟವನ್ನು ಅನುಭವಿಸಿದರು. ತಮ್ಮ ಸಹೋದರಿಯ ವಿಶ್ವಾಸ ಗಳಿಸಲು, ಆ ವ್ಯಕ್ತಿ ಜನಪ್ರಿಯ ಕ್ರಿಕೆಟಿಗ ಕ್ರಿಸ್ ಗೇಲ್ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಇದರ ಪ್ರೊಮೋಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಸುಳ್ಳು ಹೇಳಿದ್ದಾರೆ. ಆ ಉದ್ಯಮಿ ಕೊನೆಗೂ ತನ್ನ ಸಹೋದರನ ವ್ಯವಹಾರದಲ್ಲಿ 2.8 ಕೋಟಿ ರೂ. ಹೂಡಿಕೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.