ಕ್ರೈಂ

ಭೀಕರ ಕಾರು ಅಪಘಾತ, ಕೊಡಗಿನ ನವ ವಿವಾಹಿತರು ಸೇರಿದಂತೆ ಸ್ಥಳದಲ್ಲೇ ಮೂವರು ಸಾವು

410
Spread the love

ಸೋಮವಾರಪೇಟೆ: ನಾಗಮಂಗಲದಲ್ಲಿ ಬಸ್ ಮತ್ತು ಶಿಫ್ಟ್ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರ ಸಾವಿಗೀಡಾಗಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೆಂಪನಕೊಪ್ಪಲು ಬೆಳ್ಳೂರು ಕಡೆಗೆ ತೆರಳುತ್ತಿದ್ದ ಬಸ್ ಹಾಗೂ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಇದ್ದ ನವ ವಿವಾಹಿತರು ಸೇರಿದಂತೆ ಕೊಡಗು ಮೂಲದ ಮೂವರು ಸಾವಿಗೀಡಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ನವ ವಧು-ವರ ಸೇರಿದಂತೆ ಮೂವರ ದೇಹವೂ ಛಿದ್ರ ..ಛಿದ್ರವಾಗಿದೆ. ಕಾರಿನಲ್ಲಿದ್ದ ಯುವತಿಯ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗಮಂಗಲ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರಪೇಟೆ ಮೂಲದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ (55) ಮೃತ ದುರ್ದೈವಿಗಳು . ಮೃತ ಸುದೀಪ್ ಹಾಗೂ ಶ್ರೀಜ ಮುಳ್ಳೂಸೋಗೆ ಗ್ರಾಮದವರು. ಕಳೆದ 20 ದಿನಗಳ ಹಿಂದೆಯಷ್ಟೇ ಸೋಮವಾರಪೇಟೆ ಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಂದು ಅಮಾವಾಸ್ಯೆ ಹಿನ್ನಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳ ಕುಟುಂಬ ಸಹಿತ ಪೂಜೆ ಮುಗಿಸಿ ವಾಪಸ್ಸು ಮರಳುತ್ತಿದ್ದಾಗ ಜೀವ ಕಳೆದುಕೊಂಡಿದ್ದಾರೆ.

See also  ಸೂಪರ್ ಸ್ಟಾರ್ ವಿಜಯ್ ಮೇಲೆ ಚಪ್ಪಲಿ ಎಸೆದ್ಯಾರು..? ವಿಜಯ್ ಕಾಂತ್ ಅಂತ್ಯಸಂಸ್ಕಾರದ ವೇಳೆ ಅಂತದ್ದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget