ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು 2024-25ನೇ ಸಾಲಿನ ಫಿಸಿಯೋಥೆರಪಿ ಕೋರ್ಸ್ ನ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ಸುಪ್ರೀತಾ ರಾವ್ 1ನೇ ವರ್ಷದ ಬಿಪಿಟಿಯ ಸೈಕೋಲಜಿ ಮತ್ತು ಸೋಶಿಯಾಲಜಿಯಲ್ಲಿ 9ನೇ ರ‍್ಯಾಂಕ್ ಮತ್ತು 3ನೇ ವರ್ಷದ ಬಿಪಿಟಿಯ ಜನರಲ್ ಸರ್ಜರಿಯಲ್ಲಿ 10ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.
3ನೇ ವರ್ಷದ ಬಿಪಿಟಿಯ ಅರ್ಥೋಪೆಡಿಕ್ಸ್ ಮತ್ತು ಟ್ರಾಮಟೊಲಜಿಯಲ್ಲಿ ನಸ್ರೀನಾ ಕೆ, 4ನೇ ರ‍್ಯಾಂಕ್ ಮತ್ತು ಜೆಟ್ಲೆ ಜೊಯಿಸ್ ಜೊಸೆಫ್ 7ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ. 4ನೇ ವರ್ಷದ ಬಿಪಿಟಿಯ ನ್ಯೂರಾಲಜಿ ಮತ್ತು ನ್ಯೂರೊಸರ್ಜರಿಯಲ್ಲಿ ಅಲಿತ ಶಾಜು 4ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
View this post on Instagram