ಕ್ರೈಂ

ಗಣರಾಜ್ಯೋತ್ಸವದಂದು ಭಾರಿ ಸ್ಫೋಟಕ್ಕೆ ಸಂಚು ರೂಪಿಸಿದ ಉಗ್ರರು..!

739

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಜನವರಿ ೨೬ರ ಗಣರಾಜ್ಯೋತ್ಸವದ ದಿನದಂದು ಭಯೋತ್ಪಾದನಾ ದಾಳಿಯ ಕುರಿತು ಶುಕ್ರವಾರ ಗುಪ್ತಚರ ಇಲಾಖೆಗಳಿಂದ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಭದ್ರತೆಯಲ್ಲಿ ಹೆಚ್ಚಿನ ಲಕ್ಷö್ಯವಹಿಸಲಾಗಿದೆ. ಉಗ್ರರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಪಡೆ ವಿಧಾನಸಭಾ ಚುನಾವಣೆಗೆ ಒಳಪಡುವ ಐದು ರಾಜ್ಯಗಳಲ್ಲಿ ನಿಯೋಜಿಸಲಾದ ಅಧಿಕಾರಿಗಳು ಮತ್ತು ಪಡೆಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಪ್ರಮುಖ ನಾಯಕರು ಗುರಿ?

ಜನನಿಬಿಡ ಸ್ಥಳಗಳು ಮತ್ತು ಮಾರುಕಟ್ಟೆಗಳನ್ನು ಹೊರತುಪಡಿಸಿ ಉನ್ನತ ಮಟ್ಟದ ನಾಯಕರನ್ನು ಗುರಿಯಾಗಿಸಲು ಭಯೋತ್ಪಾದಕರು ದಾಳಿ ಅಥವಾ ಸ್ಫೋಟಗಳನ್ನು ನಡೆಸುವ ಸಾಧ್ಯತೆಯಿದೆ. ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಧಾರ್ಮಿಕ ಸ್ಥಳಗಳು ಮತ್ತು ಪ್ರಮುಖ ಸ್ಥಾಪನೆಗಳ ಮೇಲೆ ಕೂಡ ದಾಳಿ ನಡೆಸಬಹುದು. ಈ ಹಿನ್ನೆಲೆಯಲ್ಲಿ ಯೂನಿಟ್ ಕಂಟ್ರೋಲ್ ರೂಂಗಳು ಮತ್ತು ಕೇಂದ್ರಗಳನ್ನು ತ್ವರಿತವಾಗಿ ಮಾಹಿತಿ ಹಂಚಿಕೊಳ್ಳಲು ೨೪ ಗಂಟೆಗಳ ಕಾಲ ಸೂಕ್ತವಾಗಿ ನಿರ್ವಹಿಸಬೇಕು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.

See also  ಮಡಿಕೇರಿ: ರೈಫಲ್ ನಿಂದ ಗುಂಡು ಹಾರಿ ಯುವಕ ಸಾವು, ಕಾವೇರಿ ಹೊಳೆಯಲ್ಲಿ ಮೀನು ಬೇಟೆಗೆ ತರಳಿದ್ದಾಗ ನಡೆದಿದ್ದೇನು..?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget